ಕಳ್ಳರ ಬೆನ್ನತ್ತಿದ ಕುರಿಗಾಹಿಗಳು; ಕದ್ದ ಮೇಕೆ, ಗಾಡಿ ಬಿಟ್ಟು ಖದೀಮರು ಪರಾರಿ

23012022 Mudagal thift arrest
Published on

ಆರೋಪಿಗಳಿಗೆ ಬಲೆ ಬೀಸಿದ ಪೊಲೀಸರು

ಮುದಗಲ್: ಸಿನಿಮೀಯ ರೀತಿ ಕುರಿ ಕಳ್ಳರ ಬೆನ್ನು ಹತ್ತಿದ್ದ ಕುರಿಗಾಹಿಗಳು ಕುರಿಗಳು ಹಾಗೂ ವಾಹನ ಹಿಡಿಯುವಲ್ಲಿ ಭಾನುವಾರ ಯಶಸ್ವಿಯಾಗಿದ್ದಾರೆ. ಆದರೆ ಕಳ್ಳರು ಸ್ವಲ್ಪದರಲ್ಲೇ ಪರಾರಿಯಾಗಿದ್ದಾರೆ. ಕಳ್ಳತನಕ್ಕೆ ಬಳಸುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಸರಕು ಸಾಗಣೆ ವಾಹನವನ್ನು ಬಗಡಿತಾಂಡದ ಹತ್ತಿರ ಕುರಿ ಕಳ್ಳರು ಬಿಟ್ಟು ಓಡಿ ಹೋಗಿದ್ದಾರೆ. ಗಾಡಿಯಲ್ಲಿದ್ದ ಮೌಳಿ ಜಾತಿಯ ಒಂದು ಓತ, ಮಚ್ಚು, ರಾಡ್ ಹಾಗೂ ಹತ್ತಕ್ಕೂ ಅಧಿಕ ಕಪ್ಪು ಬಣ್ಣದ ಸ್ವೆಟರ್, ಬೆಡ್ ಶೀಟ್ ಹಾಗೂ ಕೆಲ ದಾಖಲೆಗಳಿರುವ ಡೈರಿ ಪತ್ತೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net