ಶಾಸ್ತ್ರೀಜಿ ಮರೆತ ಕಾಂಗ್ರೆಸ್ ಮುಖಂಡರು

021020 Mudagal Gandhi Jayanti
ಮುದಗಲ್‌ನ ಶಾಸಕ ಡಿಎಸ್. ಹೂಲಗೇರಿ ನಿವಾಸದಲ್ಲಿ ಶುಕ್ರವಾರ ಗಾಂಧಿ ಜಯಂತಿ ಆಚರಿಸಲಾಯಿತು.
Published on

ಮುದಗಲ್: ಶಾಸಕ ಡಿಎಸ್.ಹೂಲಗೇರಿ ನಿವಾಸದಲ್ಲಿ ಶುಕ್ರವಾರ ಕಾಂಗ್ರೆಸ್ ಮುಖಂಡರು ಕೇವಲ ಗಾಂಧಿ ಭಾವಚಿತ್ರ ಇರಿಸಿ ಜಯಂತಿ ಆಚರಿಸಿ, ಶಾಸ್ತ್ರೀಜಿಯವರನ್ನು ಮರೆತಿದ್ದು ಗಮನ ಸೆಳೆಯಿತು. ಇಬ್ಬರು ಮಹಾತ್ಮರ ಜಯಂತಿ ಒಂದೇ ದಿನ ಇದ್ದರೂ, ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸಿದ್ದು ಕಂಡು ಬಂತು. ಈ ಬಗ್ಗೆ ವಿಚಾರಿಸಿದಾಗ ಶಾಸ್ತ್ರೀಜಿ ಭಾವಚಿತ್ರ ಸಿಗಲಿಲ್ಲ ಎಂಬ ಕಾರಣವನ್ನು ಮುಖಂಡರು ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖದಾವೂದ್‌ಸಾಬ್ ಬಾಪೂಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮುಖಂಡರಾದ ಮಹಾಂತೇಶ ಪಾಟೀಲ್, ತಮ್ಮಣ್ಣ ಗುತ್ತೆದಾರ, ಪುರಸಭೆ ಸದಸ್ಯರಾದ ಎಸ್‌ಕೆ.ಅಜ್ಮೀರ್ ಬೆಳ್ಳಿಕಟ್, ತಸ್ಲಿಂ ಮುಖಂಡರಾದ ಸತೀಶ ಬೋವಿ, ತಮ್ಮಣ್ಣ ಗುತ್ತೆದಾರ,ಆದೇಶ ನಾಯಕ್, ರವಿಕುಮಾರ ವಡ್ಡರ್,ಕೃಷ್ಣಾ ಛಲವಾದಿ, ಮುನ್ನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net