ಸರಣಿ ಮನೆ ಕಳ್ಳತನದ ಆರೋಪಿ ಸೆರೆ

Mudagal thif arrest
ಆರೋಪಿ ಹನುಮಂತನನ್ನು ಪೊಲೀಸರು ಬಂಧಿಸಿ, ಕರೆದೊಯ್ಯುತ್ತಿರುವುದು.
Published on

ಮುದಗಲ್: ಪಟ್ಟಣದಲ್ಲಿ ಜ.27ರಂದು ನಡೆದ ಸರಣಿ ಮನೆ ಕಳ್ಳತನದ ಆರೋಪಿ, ದೇವದುರ್ಗ ತಾಲೂಕಿನ ಹನುಮಂತ (39) ಯಾದಗಿರಿಯಲ್ಲಿ ಸೆರಯಾಗಿದ್ದಾನೆ.

ಯಾದಗಿರಿ ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಮುದಗಲ್ ಪ್ರಕರಣ ಬಯಲಾಗಿದೆ. ಈತನ ವಿರುದ್ಧ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿವೆ. ಈತನೊಂದಿಗೆ ಮತ್ತೊಬ್ಬ ಆರೋಪಿ ಇದ್ದಾನೆಂದು ತಿಳಿದಿದ್ದು, ಆತನ ಪತ್ತೆಗೂ ಪೊಲೀಸರು ಜಾಲ ಬೀಸಿದ್ದಾರೆ. ಬಂಧಿತ ಹನುಮಂತನಿಂದ ಒಂಬತ್ತು ತೊಲ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಮುದಗಲ್‌ನಲ್ಲಿನ ಕಳವು ಪ್ರಕರಣದಲ್ಲಿ 19 ತೊಲ ಚಿನ್ನ ಕಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net