ಜಾತ್ರೆಯಲ್ಲಿ ಭಾವೈಕ್ಯತೆ ಬೆಸೆಯುವ ಕಾರ್ಯ: ಗುರುಬಸವ ಸ್ವಾಮೀಜಿ ಸಂತಸ

14-04.MDL.02
ಮುದಗಲ್ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶರಣರ ಜೀವನ ದರ್ಶನ ಪ್ರವಚನಕ್ಕೆ ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು. ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ, ಪ್ರಮುಖರಾದ ಗುರುಬಸಪ್ಪ ಸಜ್ಜನ್, ಸುರೇಂದ್ರಗೌಡ ಪಾಟೀಲ, ಶಿವಾನಂದ ಸುಂಕದ, ಮಲ್ಲಣ್ಣ ಮಾಟೂರು ಇದ್ದರು.
Published on

ಮುದಗಲ್: ಆಧುನಿಕತೆ ಒತ್ತಡದ ಬದುಕಿನಲ್ಲಿ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯಬಾರದು. ಅವುಗಳನ್ನು ಉಳಿಸಿ, ಬೆಳಸಬೇಕೆಂದು ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ ಹೇಳಿದರು


ಪಟ್ಟಣದ ಕುಂಬಾರಪೇಟೆಯ ಆರಾಧ್ಯ ದೈವ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಲ್ಯಾಣಾಶ್ರಮದ ಶ್ರೀಮಹಾಂತ ಸ್ವಾಮೀಜಿ ಸಾಲಿಮಠ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಪ್ರವಚನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.


ಪ್ರಥಮ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾವೈಕ್ಯತೆ ಬೆಸೆಯುವಂತ ಕಾರ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಪಾಲಕರ ಕರ್ತವ್ಯವಾಗಿದೆ. ನಿರಂತರ 11 ದಿನ ಶರಣರ ಜೀವನ ದರ್ಶನ ಪ್ರವಚನ ನಡೆಯಲಿದ್ದು, ಪ್ರತಿಯೊಬ್ಬರು ಆಳಿಸಿ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಗುರುಬಸಪ್ಪ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸಿದ್ದಯ್ಯ ಸ್ವಾಮಿ ಸಾಲಿಮಠ, ಸುರೇಂದ್ರಗೌಡ ಪಾಟೀಲ, ಶಿವಾನಂದ ಸುಂಕದ, ಮಲ್ಲಣ್ಣ ಮಾಟೂರು, ವೀರಭದ್ರಯ್ಯ ಮೂಲಿಮನಿ, ಶರಣಪ್ಪ ಚಿತ್ರನಾಳ, ಕಲಾವಿದರಾದ ಅಮರೇಶ ಗವಾಯಿ ಚಿಕ್ಕಕೊಟನೆಕಲ್, ರವಿಕುಮಾರ್ ಮೈಸೂರು, ಹನುಮಂತರಾಯ ಚಿಕ್ಕ ಕೊಟ್ನೆಕಲ್, ಮಂಜುನಾಥ ಗಡಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net