ಮಳೆ, ಗಾಳಿಗೆ ಬಿದ್ದ ವಿದ್ಯುತ್ ಕಂಬಗಳು

26082022 mudagal rain
Published on

ಮುದಗಲ್: ಪುರಸಭೆ ಮುಂದಿನ ರಸ್ತೆ ಬದಿಯ ನಾಲ್ಕು ವಿದ್ಯುತ್ ಕಂಬಗಳು ಗುರುವಾರ ರಾತ್ರಿ ಮಳೆ, ಗಾಳಿಗೆ ಬಿದ್ದಿವೆ.

ಈ ರಸ್ತೆ ಜನನಿಬಿಡವಾಗಿದ್ದು, ಮಧ್ಯರಾತ್ರಿ ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಅನಾಹುತ ತಪ್ಪಿದೆ. ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಹಳೆಯ ಕಂಬಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬ ಮತ್ತು ಕೇಬಲ್ ಹಾಕಲಾಗಿತ್ತು. ನೀಲಕಂಠೇಶ್ವರ ದೇವಸ್ಥಾನ, ಸ್ಟೇಟ್ ಬ್ಯಾಂಕ್, ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿಯೂ ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದಾಗಿ ಪಟ್ಟಣದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿ ಬದಲಿಸಿ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಿದರು.

ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ನಾಲ್ಕು ವಿದ್ಯುತ್ ಕಂಬಗಳು ಬಿದ್ದಿವೆ. ಮಳೆ-ಗಾಳಿಯಿಂದ ಬಿದ್ದಿವೆಯೋ ಅಥವಾ ಲಾರಿ ಡಿಕ್ಕಿಯಾಗಿ ಬಿದ್ದಿವೆಯೋ ಎಂಬುದನ್ನು ಪರಿಶೀಲಿಸಲಾಗುವುದು.| ಸಂತೋಷ ಸಿಂಗೆ ಜೆಸ್ಕಾಂ ಶಾಖಾಧಿಕಾರಿ, ಮುದಗಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net