

ಮುದಗಲ್: ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಹಾಗೂ ಬೆಳೆಗಳಿಗೆ ರೋಗಬಾಧೆ ತಡೆಗಟ್ಟಲು ರೈತರು ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕು ಎಂದು ರಾಯಚೂರು ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ.ಬಸವಣ್ಣಪ್ಪ ತಿಳಿಸಿದರು.
ಪಟ್ಟಣ ಸಮೀಪದ ಜನತಾಪುರ ಗ್ರಾಮದ ಹೊರವಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ತೊಗರಿ ಬೆಳೆ ನೂತನ ತಳಿ ಕ್ಷೇತೊತ್ಸವದಲ್ಲಿ ಮಾತನಾಡಿದರು. ಬಿತ್ತನೆ ಸಮಯದಲ್ಲಿ ರೈತರು ಜೈವಿಕ ಗೊಬ್ಬರ, ಬೀಜೋಪಚಾರ, ಸಮಗ್ರ ಪೋಷಕಾಂಶ ನಿರ್ವಹಣೆ, ಲಘು ಪೋಷಕಾಂಶದ ಮಿಶ್ರಣದ ಬಗ್ಗೆ ಮಾಹಿತಿ ಅಗತ್ಯ ಎಂದರು. ಕೃಷಿ ಉಪನಿರ್ದೇಶಕ ನಹಿಮ್ ಹುಸೇನ್, ವಿಜ್ಞಾನಿ ವಿಶ್ವನಾಥ್, ವಿಸ್ತರಣ ಕೇಂದ್ರ ಮುಖ್ಯಸ್ಥೆ ವಾಣಿಶ್ರೀ, ಸ್ಥಳೀಯ ಕೃಷಿ ಅಧಿಕಾರಿಗಳಾದ ಶ್ರೀಶೈಲ, ಎನ್. ಮಹಾಂತಯ್ಯ ಹಾಗೂ ಸಿಬ್ಬಂದಿ, ವಿವಿಧ ಭಾಗದ ರೈತರು ಇದ್ದರು.