ಸಾರ್ವಜನಿಕ ಸ್ಥಳ ಒತ್ತುವರಿ ವರದಿ ಸಲ್ಲಿಕೆ

080322 Mudgal Public Place Visit
ರಾಯಚೂರು ನಗರಾಭಿವೃದ್ಧಿ ಕೋಶದ ಎಇಇ ಶ್ರೀದೇವಿ ನೇತೃತ್ವದ ತಂಡ ಮುದಗಲ್‌ನಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಸ್ಥಳದ ಒತ್ತುವರಿ ಪರಿಶೀಲಿಸಿತು.
Published on

ಮುದಗಲ್: ಸ್ಥಳೀಯ ಪುರಸಭೆ ವ್ಯಾಪ್ತಿಯ ಸರ್ಕಾರಿ ನಿವೇಶನ, ಪುರಾತನ ಬಾವಿ ಮತ್ತು ಉದ್ಯಾನ ಜಾಗವನ್ನು ರಾಯಚೂರು ನಗರಾಭಿವೃದ್ಧಿ ಕೋಶದ ಎಇಇ ಶ್ರೀದೇವಿ ನೇತೃತ್ವದ ತಂಡ ಮಂಗಳವಾರ ಪರಿಶೀಲನೆ ನಡೆಸಿತು. ವೆಂಕಟರಾಯನ ಪೇಟೆಯಲ್ಲಿನ ಲೇಔಟ್‌ನಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಸ್ಥಳದ ಸುತ್ತ ತಡೆಗೋಡೆ ನಿರ್ಮಾಣ, ಹಳೇಪೇಟೆ ಕೆರೆ, ಸೋಮವಾರ ಪೇಟೆ ಕೆರೆ ಬಗ್ಗೆ ತಂಡ ಮಾಹಿತಿ ಪಡೆಯಿತು. ಹೈಕೋರ್ಟ್ ನಿರ್ದೇಶನ ಹಾಗೂ ಮೇಲಧಿಕಾರಿಗಳ ಸೂಚನೆಯಂತೆ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಎಇಇ ಶ್ರೀದೇವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net