ಪ್ರಚೋದನೆ ನೀಡಿದರೆ ಕಾನೂನು ಕ್ರಮ, ಪಿಎಸ್‌ಐ ಪ್ರಕಾಶ ರೆಡ್ಡಿ ಡಂಬಳ ಸಲಹೆ

110622 Peace meeting at Mudgal police station
ಮುದಗಲ್ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರಕಾಶ ರೆಡ್ಡಿ ಡಂಬಳ ಮಾತನಾಡಿದರು.
Published on

ಮುದಗಲ್: ಸಾಮಾಜಿಕ ಹಾಗೂ ಧಾರ್ಮಿಕ ವಿಚಾರದಲ್ಲಿ ಪ್ರಚೋದನೆ ನೀಡುವುದು ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಪ್ರಕಾಶ ರೆಡ್ಡಿ ಡಂಬಳ ಹೇಳಿದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಭಾವನಾತ್ಮಕ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸಂದೇಶಗಳನ್ನು ಹರಡುತ್ತಿರುವುದು ಕಂಡು ಬರುತ್ತದೆ. ಇಂತಹ ಸಂದೇಶಗಳ ಸೂಕ್ತ ಮಾಹಿತಿ ತಿಳಿಯದೆ ಮತ್ತೊಬ್ಬರಿಗೆ ಹಂಚುವುದು ಹಾಗೂ ಪ್ರಚೋದಿಸುವುದು ಮಾಡಬಾರದು. ಸಾಮಾಜಿಕ ಜಾಲತಾಣದಲ್ಲಿ ಬಂದಂತ ಎಲ್ಲ ಮಾಹಿತಿಯಲ್ಲಿ ಸತ್ಯಾಂಶ ಇಲ್ಲದಿರಬಹುದು. ಇದರಿಂದಾಗಿ ದುಷ್ಕೃತ್ಯದಲ್ಲಿ ತೊಡಗುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net