ಮುದಗಲ್‌ನಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು

290720 Mudgal Home Rain Water
ಮುದಗಲ್‌ನ 11ನೇ ವಾರ್ಡ್ ವೆಂಕಟರಾಯನ ಪೇಟೆಯಲ್ಲಿನ ಜನತಾ ಕಾಲನಿಯಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿರುವುದು.
Published on

ಮುದಗಲ್: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದ 11ನೇ ವಾರ್ಡ್ ವೆಂಕಟರಾಯಣ ಪೇಟೆ, ಜನತಾ ಕಾಲನಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸುವಂತಾಯಿತು.

ಚರಂಡಿ ನಿರ್ಮಾಣ ಮಾಡದೇ ಸಿಸಿ ರೋಡ್ ಮಾಡಿದ್ದರಿಂದ ಸುಮಾರು 20 ಕ್ಕೂ ಹೆಚ್ಚು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದವಸ ಧಾನ್ಯಗಳೆಲ್ಲ ನೀರು ಪಾಲಾಗಿದೆ. ವೃದ್ಧರು, ಚಿಕ್ಕ ಮಕ್ಕಳು, ಕುಟುಂಬಸ್ಥರು ಮನೆಯಲ್ಲಿ ಮಲಗಲು ಜಾಗ ಇಲ್ಲದೆ ರಾತ್ರಿಯೆಲ್ಲ ಜಾಗರಣೆ ಮಾಡಿದರು.

ತಗ್ಗು ಪ್ರದೇಶದ ಮನೆಗಳ ಮುಂದೆ ಸಮನಾಗಿ ಸಿಸಿ ರಸ್ತೆ ನಿರ್ಮಿಸಿದರೆ ಇಂತಹ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕಾಲನಿ ನಿವಾಸಿಗಳ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net