ಮುದಗಲ್ ಪೀರಲು ದೇವರುಗಳ ಪ್ರತಿಷ್ಠಾಪನೆ

mdl-1
ಮುದಗಲ್ ಕಿಲ್ಲಾದ ಹುಸೇನ್ ಆಲಂ ದರ್ಗಾದಲ್ಲಿ ಪೀರಲು ದೇವರುಗಳನ್ನು ಪ್ರತಿಷ್ಠಾಪನೆ ಮಾಡಿರುವುದು. ದರ್ಗಾದ ಮುಜಾವರಗಳಾದ ಬಾಬಾ, ಸಾದಿಕ್ ಬೇಗ್, ನಜೀರ್ ಸಾಬ್, ಶಬ್ಬೀರ್ ಪಾಷಾ, ರಾಜು ಇತರರಿದ್ದರು.
Published on

ಮುದಗಲ್: ಮೊಹರಂ ಹಬ್ಬದ ನಿಮಿತ್ತ ಪಟ್ಟಣದ ಕಿಲ್ಲಾದ ಹಜರತ್ ಇಮಾಮೆ ಹುಸೇನ್ ಆಲಂ ದರ್ಗಾದಲ್ಲಿ ಪೀರಲು ದೇವರುಗಳನ್ನು ಶನಿವಾರ ಪ್ರತಿಷ್ಠಾಪನೆ ಮಾಡಲಾಯಿತು.

ಮೊಹರಂ ಮೊದಲ ದಿನವಾದ ಶನಿವಾರ ಮೇಗಳಪೇಟೆ ಹಜರತ್ ಇಮಾಮೆ ಹಸನ್ ಆಲಂ, ಕಿಲ್ಲಾದ ಹಜರತ್ ಇಮಾಮೆ ಹುಸೇನ್ ಆಲಂ, ವೆಂಕಟರಾಯನಪೇಟೆ. ಹಜರತ್ ಇಮಾಮೆ ಉಪ್ಪಾರ್ ಕಾಸಿಂಪೀರ್, ಹಜರತ್ ಇಮಾಮೆ ಕಾಸಿಂ, ಹಜರತ್ ಅಬ್ಬಾಸ್ ಅಲಿ, ಚೌಡಿಕಟ್ಟೆ ಲಾಲ್ ಬಂದೆ, ಬೇಗಂಪುರ್ ಪೇಟೆ ಅಲ್ಲಾಪೀರಾ, ಹಳೆಪೇಟೆ ಕಾಸಿಂ ಪೀರಾ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಆಲಂಗಳನ್ನು ಸ್ಥಾಪನೆ ಮಾಡಲಾಯಿತು. ಭಾವೈಕ್ಯಕ್ಕೆ ಹೆಸರಾದ ಮುದಗಲ್ ಮೊಹರಂ ಹಬ್ಬಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net