

ಮುದಗಲ್: ಪಟ್ಟಣದ ಐತಿಹಾಸಿಕ ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ಏ.12 ರಂದು ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ವೀರಭದ್ರಪ್ಪ ಕೊಳ್ಳಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಜಾತ್ರೆ ನಿಮಿತ್ತ ರುದ್ರಾಭಿಷೇಕ, 251 ಪೂರ್ಣ ಕುಂಭಗಳ ಮೆರವಣಿಗೆ ಜಾಡರಪೇಟೆಯಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ನೀಲಕಂಠೇಶ್ವರ ದೇಗುಲಕ್ಕೆ ತಲುಪಲಿದೆ. ನಂತರ ಕಳಸಾರೋಹಣ ನೆರವೇರಲಿದೆ. ಲಕ್ಷ ಬಿಲ್ವಾರ್ಚನೆ ಮತ್ತು ಮಹಾದಾಸೋಹ ಹಾಗೂ ಸಂಜೆ ಮಹಾರಥೋತ್ಸವ ಜರುಗಲಿದೆ. ಕುರುಹಿನಶೆಟ್ಟಿ ಪೀಠಾಧ್ಯಕ್ಷ ಗದಗ-ಬೆಟಗೇರಿಯ ಶ್ರೀ 1008 ಜಗದ್ಗುರು ನಾಲ್ವಡಿ ಶ್ರೀ ನೀಲಕಂಠ ಪಟ್ಟಾದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು. ಪ್ರಮುಖರಾದ ವಿರುಪಾಕ್ಷಪ್ಪ ಜೀಡಿ, ರವಿಜೀಡಿ, ಜಗದೀಶ ಜೀಡಿ, ಶಂಕ್ರಪ್ಪ ಜೀಡಿ, ರಾಚಪ್ಪ ಗಬ್ಬೂರು, ದೇವಸ್ಥಾನ ಅರ್ಚಕ ನಿರುಪಾಧಿ ಇತರರಿದ್ದರು.