ಮೊಹರಂ ಆಚರಣೆಗೆ ಸೌಕರ್ಯ ಅಗತ್ಯ

31072022 Mudagal meeting
Published on

ಲಿಂಗಸುಗೂರು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿಕೆ ಮುದಗಲ್ ಪುರಸಭೆ ಸಭಾಂಗಣದಲ್ಲಿ ಮೀಟಿಂಗ್

ಮುದಗಲ್ : ರಾಜ್ಯದಲ್ಲಿಯೇ ಅತಿ ಹೆಚ್ಚು ಜನ ಸೇರಿ ಮುದಗಲ್ ಪಟ್ಟಣದಲ್ಲಿ ಆಚರಿಸುವ ಮೊಹರಂ ವೇಳೆ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದು ಅವಶ್ಯ ಎಂದು ಲಿಂಗಸುಗೂರು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ತುರ್ತುಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು, ವಿದ್ಯುತ್ ಸೇರಿ ಮೂಲ ಸೌಕರ್ಯಗಳಿಗೆ ಸಮಸ್ಯೆ ಆಗದಂತೆ ಪುರಸಭೆ ಆಡಳಿತ ನಿರ್ವಹಿಸಬೇಕು. ಅದರಂತೆ ಚುನಾಯಿತ ಸದಸ್ಯರ ಸಹಕಾರ ಕೂಡ ಅವಶ್ಯ ಎಂದರು.

ಪಟ್ಟಣದಲ್ಲಿ ನಡೆಯುತ್ತಿರುವ ಇಲಕಲ್-ಲಿಂಗಸುಗೂರು ರಸ್ತೆ ಕಾಮಗಾರಿ ನಿಧಾನದಿಂದಾಗಿ ಟ್ರಾಫಿಕ್ ತೊಂದರೆ ಆಗುತ್ತಿದೆ. ಸಮಸ್ಯೆ ಆಗದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net