ಆಲಂಗಳ ಮುಂದೆ ಅಪ್ಪು ಭಾವಚಿತ್ರ ಪ್ರದರ್ಶನ

100822 Mudgal Moharram Appu Photo
ಮುದಗಲ್‌ನಲ್ಲಿ ಮಂಗಳವಾರ ಮೊಹರಂ ಮೆರವಣಿಗೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿದರು.
Published on

ಮುದಗಲ್: ಪಟ್ಟಣದಲ್ಲಿ ನಡೆದ ಐತಿಹಾಸಿಕ ಪ್ರಸಿದ್ಧ ಮೋಹರಂ ಆಚರಣೆಯಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ಭಾವಚಿತ್ರ ಪ್ರದರ್ಶಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಮಾನಿಗಳು ನಿಂಬೆ ಮತ್ತು ಬಾಳೆ ಹಣ್ಣಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದು ಉತ್ತತ್ತಿಯೊಂದಿಗೆ ಆಲಂಗಳ ಕಡೆ ಎಸೆದರು. ಗಣ್ಯರ ವೇದಿಕೆ ಹತ್ತಿರ ಕೆಲವು ಯುವಕರು ಸಿದ್ದರಾಮಯ್ಯಗೆ ಜೈ, ಕರ್ನಾಟಕದ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net