ವೇತನ ಇಲ್ಲದೆ ಸಂಸಾರ ನಿರ್ವಹಣೆಗೆ ತೊಂದರೆ

Mudagal labour appeal
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜುಗೆ ಮುದಗಲ್ ಪುರಸಭೆ ದಿನಗೂಲಿ ನೌಕರರು ಹಾಗೂ ಹೊರ ಗುತ್ತಿಗೆ ನೌಕರರು ಮನವಿ ಸಲ್ಲಿಸಿದರು. ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ ಇದ್ದರು.
Published on

ಮುದಗಲ್: ಪುರಸಭೆ ದಿನಗೂಲಿ ನೌಕರರು ಹಾಗೂ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜುಗೆ ಕಾರ್ಮಿಕರು ಮನವಿ ಸಲ್ಲಿಸಿದರು.

ಕಳೆದ 14 ತಿಂಗಳಿಂದ ವೇತನ ನೀಡಿಲ್ಲ. ಇದರಿಂದಾಗಿ ಸಂಸಾರದ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಬಾಕಿ ವೇತನ ನೀಡಬೇಕು. ಪರಿಷ್ಕೃತ ಕನಿಷ್ಠ ವೇತನ, ಇಪಿಎಫ್ ಬಾಕಿ, ಮೃತ ಕಾರ್ಮಿಕರ ಮಕ್ಕಳ ಉದ್ಯೋಗ ಹಾಗೂ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಎಂದು ಒತ್ತಾಯಿಸಿದರು.

ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸುವುದಾಗಿ ಸಚಿವ ಬೋಸರಾಜು ಭರವಸೆ ನೀಡಿದರು. ಪೌರ ಕಾರ್ಮಿಕರಾದ ಸಂಜೀವಪ್ಪ ಮೇಗಳಪೇಟೆ, ನಾಗಪ್ಪ, ದೇವೇಂದ್ರ, ಹುಸೇನಿ ಚಲುವಾದಿ, ಸಂಪತ್, ಪ್ರಶಾಂತ್, ರಮೇಶ್, ಪ್ರದೀಪ್ ಚಲುವಾದಿ, ಪರಶುರಾಮ, ಸೈಯದ್, ಸುರೇಶ್, ಹನುಮೇಶ, ಶಿವರಾಜ್, ಲಕ್ಕಪ್ಪ, ಮೌನೇಶ, ವಿನಯ, ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net