

ಮುದಗಲ್: ಮಂಡಲ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಶನಿವಾರ ರಕ್ಷಾಬಂಧನ ಅಂಗವಾಗಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ರಾಖಿ ಕಟ್ಟಿ ರಕ್ಷಬಂಧನ ಶುಭ ಕೋರಿದರು.
ರಕ್ಷಾ ಬಂಧನದ ನಿಮಿತ್ತ ಕಾಣಿಕೆಯನ್ನು ಪಡೆಯದೇ, ನೀವು ನಾಗರಿಕರಿಗೆ ರಕ್ಷಣೆ ನೀಡುತ್ತಿರುವುದೇ ನಮಗೆ ದೊಡ್ಡ ಕಾಣಿಕೆಯಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬಿಜೆಪಿ ಮಹಿಳಾ ಪದಾಧಿಕಾರಿಗಳು ಕೋರಿದರು.
ಪ್ರಮುಖರಾದ ನಿರ್ಮಲಾ, ಬಸಮ್ಮ ಕುಂಬಾರ, ರುದ್ರಮ್ಮ, ಕುಸುಮಾ, ರಾಚಮ್ಮ, ಪದ್ದಮ್ಮ, ಸಣ್ಣ ಸಿದ್ದಯ್ಯಸ್ವಾಮಿ, ನಾಗರಾಜ ತಳವಾರ, ನಾಗರಾಜ ಉಪ್ಪಾರ, ರಮೇಶ, ಶರಣಪ್ಪ ಹಂಚಿನಾಳ, ರಾಚಪ್ಪ ಗುಡೂರ ಸೇರಿ ಇತರರಿದ್ದರು.