ಗಮನ ಸೆಳೆದ ಹಾಡುಗಳು

29102022 mudagal koti gayana
Published on

ಮುದಗಲ್: ಸ್ಥಳೀಯ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಕನ್ನಡ-ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಪುರಸಭೆಯಿಂದ ರಾಜ್ಯೋತ್ಸವದ ಅಂಗವಾಗಿ ಕನ್ನಡ ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರ ಜರುಗಿತು.

ಪುರಸಭೆ ಅಧ್ಯಕ್ಷೆ ಅಮೀನಾ ಬೇಗಂ ಸೈಯದ್ ಸಾಬ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನನ್ನ ನಾಡು ನನ್ನದು ಹಾಗೂ ಕನ್ನಡ ನಾಡಿನ ಹಾಡುಗಳನ್ನು ನೂರಾರು ವಿದ್ಯಾರ್ಥಿಗಳು ಹಾಡುವ ಮೂಲಕ ಗಮನ ಸೆಳೆದರು. ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ಜಮಖಂಡಿ, ಸದಸ್ಯ ಮೈಬೂಬ ಕಡ್ಡಿಪುಡಿ, ಮುಖಂಡರಾದ ಸಣ್ಣ ಸಿದ್ದಯ್ಯ ಮೇಗಳಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net