ಗ್ರಾಮೀಣ ಪ್ರತಿಭೆಗಳಿಗೆ ಸಿಗಲಿ ಮನ್ನಣೆ

16092022 mudagal prathibha karanji
Published on

ಮುದಗಲ್: ಅನೇಕ ಸೌಕರ್ಯಗಳ ಕೊರತೆ ನಡುವೆಯೂ ಶಿಕ್ಷಣ ಪಡೆಯುತ್ತಿರುವ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಮನ್ನಣೆ ಸಿಗುಬೇಕೆಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಹೇಳಿದರು.

ನಾಗಲಾಪುರದ ವಿನಾಯಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಶಿಕ್ಷಣ ಸಂಯೋಜಕ ಸಂತೋಷ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಸಂಗಯ್ಯ, ವಿನಾಯಕ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸೋಮಣ್ಣ ಜೂಲಗುಡ್ಡ, ಪ್ರಮುಖರಾದ ನೀಲಪ್ಪ ಹೊಸಮನಿ, ಅರುಣಕುಮಾರ ಯರದಿಹಾಳ, ಗ್ಯಾನನಗೌಡ, ಮಹಾಂತೇಶ ಪಿಕಳಿಹಾಳ, ಕೇಶವರೆಡ್ಡಿ, ಕರಿಯಪ್ಪ ಯಾದವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net