ಗುಣಮಟ್ಟದ ಆಹಾರ-ಸ್ವಚ್ಛತೆಗೆ ಆದ್ಯತೆ ನೀಡಿ

mdl-1
ಮುದಗಲ್‌ನಲ್ಲಿ ನೂತನ ಇಂದಿರಾ ಕ್ಯಾಂಟೀನನ್ನು ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಉದ್ಘಾಟಿಸಿದರು. ಶಾಸಕ ಮಾನಪ್ಪ ವಜ್ಜಲ್, ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಂಜಾನಬೀ, ಮುಖ್ಯಾಧಿಕಾರಿ ನರಸರೆಡ್ಡಿ ಇತರರಿದ್ದರು.
Published on

ಮುದಗಲ್: ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳು ನಾಗರಿಕರಿಗೆ ಅನುಕೂಲವಾಗಿರುವುದು ಸಂತೋಷದ ಸಂಗತಿ. ಆದರೆ ಸರ್ಕಾರ ಆರಂಭಿಸಿದ ಎಷ್ಟೋ ಇಂದಿರಾ ಕ್ಯಾಂಟೀನ್‌ಗಳು ಸ್ಥಗಿತಗೊಂಡಿದ್ದು, ಪುನರಾರಂಭಿಸಬೇಕೆಂದು ಶಾಸಕ ಮಾನಪ್ಪ ಡಿ. ವಜ್ಜಲ್ ಒತ್ತಾಯಿಸಿದರು.

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದರು. ಇಂದಿರಾ ಕ್ಯಾಂಟೀನ್ ಭಾಗಶಃ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಿದೆ.

ಈ ಮುಂಚೆ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳು ಎಷ್ಟೋ ಕಡೆ ಸೂಕ್ತ ನಿರ್ವಹಣೆಯಿಲ್ಲದೆ ಬಂದ್ ಆಗಿವೆ. ಅವುಗಳನ್ನು ಸರ್ಕಾರ ದುರಸ್ತಿಗೊಳಿಸಿ ಮತ್ತೆ ಆರಂಭಿಸಬೇಕು. ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ, ಶುದ್ಧ ಕುಡಿವ ನೀರು ಒದಗಿಸಿ, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ, ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಂಜಾನಬೀ, ಸದಸ್ಯರಾದ ಅಮೀನಾಬೇಗಂ, ರಾಬಿಯಾಬೇಗಂ, ಜಯಶ್ರೀ ಜೀಡಿ, ಸದಸ್ಯರಾದ ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಅಮೀರಬೇಗ್ ಉಸ್ತಾದ್, ಬಾಬು ಉಪ್ಪಾರ, ಮುಖ್ಯಾಧಿಕಾರಿ ನರಸರಡ್ಡಿ, ಕೆಡಿಪಿ ಸದಸ್ಯ ರಾಘವೇಂದ್ರ ಕುದುರಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮಹಿಬೂಬ ಬಾರಿಗಿಡ, ಬಿಜೆಪಿ ತಾಲೂಕಾಧ್ಯಕ್ಷ ಅಯ್ಯಪ್ಪ, ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ ಇತರರಿದ್ದರು.

ಶಾಸಕ ಮಂಜುನಾಥ ಹೇಳಿಕೆ ಖಂಡನೀಯ: ಇತ್ತೀಚೆಗೆ ಭಾರತ-ಪಾಕ್ ಯುದ್ಧದ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ ಹಗುರವಾಗಿ ಮಾತಾನಾಡಿರುವುದು ಖಂಡನೀಯ. ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಿತ್ತು. ಪಾಕಿಸ್ತಾನದ ಸುಳ್ಳು ಹೇಳಿಕೆಗಳನ್ನು ಕೆಲ ರಾಜಕಾರಣಿಗಳು ಅನುಸರಿಸುತ್ತಿರುವುದು ಖೇದಕರ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸಾಕ್ಷಿ ಕೇಳುವುದು, ಇಲ್ಲಸಲ್ಲದ ಹೇಳಿಕೆ ನೀಡಿ ಹೆಸರು ಗಿಟ್ಟಿಸಿಕೊಳ್ಳುವುದು ಪರಿಪಾಠ ಮಾಡಿಕೊಂಡಿದ್ದಾರೆ ಎಂದು ವಜ್ಜಲ್ ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net