ರಸ್ತೆ ಮಧ್ಯೆ ಸಿಲುಕಿದ ಸರ್ಕಾರಿ ಬಸ್

mdl-1
ಹೂನೂರು ಗ್ರಾಮದ ರಸ್ತೆಯ ತಗ್ಗಿನಲ್ಲಿ ಅಂಕಲಿಮಠ - ಮಂಗಳೂರು ಬಸ್‌ನ ಚಕ್ರ ಸಿಲುಕಿರುವುದು.
Published on

ಮುದಗಲ್: ಸಮೀಪದ ಹೂನೂರು ಗ್ರಾಮದ ರಸ್ತೆ ತಗ್ಗಿನಲ್ಲಿ ಅಂಕಲಿಮಠ - ಮಂಗಳೂರು ಮಾರ್ಗದ ಬಸ್‌ನ ಮುಂದಿನ ಚಕ್ರ ಸಿಲುಕಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಆಯಿತು.

ನಂತರ ಟ್ರಾೃಕ್ಟರ್ ಹಾಗೂ ಸ್ಥಳೀಯರ ನೆರವಿನಿಂದ ಚಕ್ರ ಹೊರತೆಗೆದು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ನೆರೆಯ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸಿಸಿ ಮಾಡದ್ದರಿಂದ ಚರಂಡಿ ನೀರು, ಮಳೆ ನೀರು ಸಂಗ್ರಹವಾಗಿ ರಸ್ತೆ ಕೆಸರುಗದ್ದೆಯಂತಾಗಿದೆ.

ಕೂಡಲೇ ಲೋಕೋಪಯೋಗಿ ಅಧಿಕಾರಿಗಳು ಎಚ್ಚೆತ್ತು ಸಿಸಿ ರಸ್ತೆ ಹಾಕಿ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಹೂನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net