ಮುದಗಲ್ ನಲ್ಲಿ ತಂಪೆರೆದ ಮಳೆ

bangalore rains
Published on

ಮುದಗಲ್/ಹಟ್ಟಿಚಿನ್ನದಗಣಿ: ಮುದಗಲ್ ಪಟ್ಟಣದಲ್ಲಿ ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಿಗೆ ಬುಧವಾರ ಸಂಜೆ ಮಳೆ ತಂಪೆರೆದಿದೆ. ಮಳೆ ಅರ್ಧತಾಸಿಗೂ ಹೆಚ್ಚು ಸಮಯ ಸುರಿಯಿತು. ಮಳೆ-ಗಾಳಿಗೆ ಅನೇಕ ಗಿಡಗಳ ಟೊಂಗೆಗಳು ಮುರಿದು ಬಿದ್ದಿದವು. ಕೆಲವು ಚಪ್ಪರ ಹಾಗೂ ಮನೆ ಮುಂದೆ ಹಾಕಿದ್ದ ತಗಡಗಳು ಹಾರಿ ಹೋದವು.

ಹಟ್ಟಿಚಿನ್ನದಗಣಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಂಗಳವಾರ ರಾತ್ರಿಯಿಂದ ಭಾರಿ ಬಿರುಗಾಳಿಯೊಂದಿಗೆ ತುಂತುರು ಮಳೆಯಾಗಿದೆ. ಹಟ್ಟಿ, ವಂದಲಿ, ರೋಡಲಬಂಡಾ ಸೇರಿ ಹಲವು ಗ್ರಾಮಗಳಲ್ಲಿ ಸಂಜೆ ತುಂತುರು ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net