ಉಟಕನೂರು ತಾತನ ಜ್ಯೋತಿ ರಥಯಾತ್ರೆಗೆ ಸ್ವಾಗತ

26mdl01
ಮುದಗಲ್ ಪಟ್ಟಣಕ್ಕೆ ಉಟಕನೂರು ಶ್ರೀ ಬಸವಲಿಂಗ ದೇಶಿಕೇಂದ್ರ ಮಹಾಶಿವಯೋಗಿಗಳ ಜ್ಯೋತಿ ರಥವನ್ನು ಭಕ್ತರು ಸ್ವಾಗತಿಸಿಕೊಂಡರು. ಮಹೇಶಸ್ವಾಮಿ ವಸ್ತ್ರದ್, ಅಮರೇಶ ಹೊನ್ನಳ್ಳಿ, ಶರಣಗೌಡ ಮೈದನಾಪೂರು, ಈರಣ್ಣ ಗುಡೂರು, ಶರಣಪ್ಪ ಚಿತ್ರನಾಳ, ಶಶಿಧರ ಕಂಚಿಮಠ, ಶರಣಪ್ಪ ಹಂಚಿನಾಳ ಇತರರಿದ್ದರು.
Published on

ಮುದಗಲ್: ಪಟ್ಟಣಕ್ಕೆ ಆಗಮಿಸಿದ ಉಟಕನೂರು ಶ್ರೀ ಬಸವಲಿಂಗ ದೇಶಿಕೇಂದ್ರ ಮಹಾಶಿವಯೋಗಿಗಳ ಜ್ಯೋತಿ ರಥಯಾತ್ರೆಗೆ ಭಕ್ತರು ಬುಧವಾರ ಅದ್ದೂರಿಯಾಗಿ ಸ್ವಾಗತಿಸಿಕೊಂಡರು.

ಹಡಗಲಿಯ ಪಿಕಳಿಹಾಳ ಗ್ರಾಮದಿಂದ ಆಗಮಿಸಿದ ಜ್ಯೋತಿ ರಥವನ್ನು ಹಳೇಪೇಟೆಯ ತಾವರಗೇರಾ ರಸ್ತೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ಉಟಕನೂರು ತಾತಪ್ಪನ ಗದ್ದುಗೆಗೆ ಪೂಜೆ ಸಲ್ಲಿಸಿ, ಡೊಳ್ಳು, ಬಾಜಾ-ಭಜಂತ್ರಿ, ಮಹಿಳೆಯರ ಕಳಸ-ಕನ್ನಡಿ ಮೆರವಣಿಗೆಯೊಂದಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು.

ಉಟಕನೂರು ಪೂಜ್ಯರಾದ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸದ್ಭಕ್ತರೆಲ್ಲ ತಾತನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕೃಪೆಗೆ ಪಾತ್ರರಾಗಬೇಕು ಎಂದು ಆಶೀರ್ವಚನ ನೀಡಿದರು.

ಮಠದ ಭಕ್ತ ಬಸವರಾಜಪ್ಪ ಹರ್ಲಾಪೂರ ಮಾತನಾಡಿ, ಏ.30 ರಂದು ಉಟಕನೂರು ಮಠದಲ್ಲಿ ಅಡವಿಸಿದ್ಧೇಶ್ವರ ಶಿಲಾ ಮಂದಿರ ಮತ್ತು ರಥೋತ್ಸವ ಲೋಕಾರ್ಪಣೆ, ಪಟ್ಟಾಧಿಕಾರ, ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ನೆರವೇರಲಿದೆ. ಮೇ 1 ರಂದು ಸಾಮೂಹಿಕ ವಿವಾಹ, 2 ಕ್ಕೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 3 ಕ್ಕೆ ರೈತ ಸಮಾವೇಶ, 4 ಕ್ಕೆ ಲಕ್ಷ ದೀಪೋತ್ಸವ ಹಾಗೂ ಏ.10 ರಿಂದ 29 ರವರೆಗೆ ಬಸವ ಮಹಾಪುರಾಣ ನಡೆಯಲಿವೆ ಎಂದು ತಿಳಿಸಿದರು.

ಪ್ರಮುಖರಾದ ಮಹೇಶ ವಂದಾಲಿ, ಮಹಾಂತೇಶ ಅಕ್ಷತ್ತಿ, ಮಲ್ಲಪ್ಪ ಮಾಟೂರು, ಅಮರೇಶ ಪೊಲೀಸ್, ಶರಣಪ್ಪ ಕುಂಬಾರ, ಬಸವರಾಜ ಬಳಿಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net