ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ

Mudagal fertilizer shop visit formars
ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದಾಗಿ ರೈತ ಮುಖಂಡರ ಆರೋಪದ ಮೇರೆಗೆ ಮುದಗಲ್‌ನ ಬಾಲಾಜಿ ಫರ್ಟಿಲೈಸರ್ ಅಂಗಡಿಗೆ ಆರ್‌ಎಸ್‌ಕೆ ಕೃಷಿ ಅಧಿಕಾರಿ ಮಹಾಂತಯ್ಯ ಹಿರೇಮಠ ಅವರು ಮಂಗಳವಾರ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡರು.
Published on

ಮುದಗಲ್, ಫರ್ಟಿಲೈಸರ್ ಅಂಗಡಿ, ರೈತ ಸಂಘ, ಮುತ್ತಿಗೆ ಹಾಕಿ ಪ್ರತಿಭಟನೆ,

Mudgal, fertilizer shop, farmers' association, blockade and protest,

ಮುದಗಲ್: ಪಟ್ಟಣದ ಬಾಲಾಜಿ ಫರ್ಟಿಲೈಸರ್ ಅಂಗಡಿ ಮಾಲೀಕರು ನಿಗದಿಗಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘದ ಮುಖಂಡರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸರ್ಕಾರದ ಡಿಎಪಿ ಮೂಲ ದರ 50 ಕೆಜಿ ಚೀಲಕ್ಕೆ 1350 ರೂ. ಇದೆ. ಆದರೆ, ಬಾಲಾಜಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ 1600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಬಿಳಿ ಹಾಳೆಯ ಮೇಲೆ ಚೀಟಿ ಬರೆದು ಕೊಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರದ ಜತೆಗೆ ಜಿಂಕ್ ಪೌಡರ್ ಖರೀದಿಸುವಂತೆ ಹೇಳುತ್ತಿದ್ದು, ರೈತರಿಗೆ ಹೊರೆಯಾಗುತ್ತಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಂಗಡಿ ಮಾಲೀಕರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು.

ವಿಷಯ ತಿಳಿದು ಆರ್‌ಎಸ್‌ಕೆ ಕೃಷಿ ಅಧಿಕಾರಿ ಮಹಾಂತಯ್ಯ ಭೇಟಿ ನೀಡಿ ಮಾಹಿತಿ ಪಡೆದರು. ಈ ವೇಳೆ ರೈತರು ದರಪಟ್ಟಿ ಹಾಕದೆ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಅಂಗಡಿಗೆ ಬೀಗ ಹಾಕಬೇಕು. ಪರವಾನಗಿ ರದ್ದು ಮಾಡಬೇಕೆಂದು ಪಟ್ಟು ಹಿಡಿದರು. ರೈತರಿಗೆ ಅನ್ಯಾಯವಾಗದಂತೆ ರಸಗೊಬ್ಬರ ಪೂರೈಕೆ ಮಾಡಬೇಕು. ಕೃತಕ ಅಭಾವ ಸೃಷ್ಟಿಸಬಾರದೆಂದು ಅಂಗಡಿ ಮಾಲೀಕರಿಗೆ ಕೃಷಿ ಅಧಿಕಾರಿ ಸೂಚಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ, ಮಹಾಂತಗೌಡ ಕನಸಾವಿ, ಬಸವರಾಜ ಬನ್ನಿಗೋಳ, ಶಿವರಾಜ, ಮಲ್ಲಿಕಾರ್ಜುನ, ಶಿವರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net