

ಮುದಗಲ್: ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ತಂತ್ರ ರೂಪಿಸಲು ಸಾಕ್ಷಿಯಾಗಿದ್ದ ಪಟ್ಟಣದ ಪ್ರಮುಖ ರಾಜಕೀಯ ಮುಖಂಡರ ಎರಡು ಗೆಸ್ಟ್ ಹೌಸ್‌ಗಳಿಗೆ ಗುರುವಾರ ಸಿಸಿ ಕ್ಯಾಮರಾ ಹಾಕಲಾಗಿದೆ. ಸಿಎಂ ಬಿಎಸ್‌ವೈ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಾಸ್ತವ್ಯ ಹೂಡಿದ್ದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರ ಗೆಸ್ಟ್ ಹೌಸ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಸ್ತವ್ಯವಿದ್ದ ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿಯ ಸಪ್ತಗಿರಿ ನಿವಾಸದ ಮುಂದೆ ಚುನಾವಣಾ ಅಧಿಕಾರಿಗಳು ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಹದಿನೈದು ದಿನದಿಂದ ಸಾವಿರಾರು ಜನರಿಂದ ತುಂಬಿ ತುಳುಕುತಿದ್ದ ಗೆಸ್ಟ್ ಹೌಸ್‌ಗಳು ಇದೀಗ ಖಾಲಿಖಾಲಿಯಾಗಿದ್ದು, ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿವೆ.