ಬದುಕು ಬದಲಿಸುವ ಸಾಮಾಜಿಕ ನಾಟಕ

11122022 mudagal drama
Published on

ಮುದಗಲ್ : ಸಾಮಾಜಿಕ ನಾಟಕಗಳನ್ನು ಮನರಂಜನೆಗೆ ಸೀಮಿತಗೊಳಿಸದೆ ಅದರಲ್ಲಿ ಬರುವ ಒಳ್ಳೆಯ ಸನ್ನಿವೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಬದಲಾಯಿಸಿಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಲಿಂಗಸುಗೂರು ಮಂಡಲ ಅಧ್ಯಕ್ಷ ಈಶ್ವರ ವಜ್ಜಲ್ ಹೇಳಿದರು.

ಬೊಮ್ಮನಾಳದಲ್ಲಿ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಹಠವಾದಿ ಘಟಪುತ್ರ’ ಸಾಮಾಜಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರಿಗೆ ಮನತಣಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ನಾಟಕ ಹಮ್ಮಿಕೊಂಡಿರುವುದು ಶ್ಲಾಘನೀಯ. ಈ ನಾಟಕದಲ್ಲಿ ಬರುವ ಒಳ್ಳೆೆಯ ಸನ್ನಿವೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟ ಸನ್ನಿವೇಶಗಳನ್ನು ಇಲ್ಲಿಯೇ ಮರೆತು ಬಿಡಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net