ಡಿ.ಭೋಗಾಪುರ ತಾಂಡಾಕ್ಕೆ ಟಿಎಚ್‌ಒ ತಂಡ ಭೇಟಿ

mdl-1
ದೇಸಾಯಿ ಭೋಗಾಪುರ ತಾಂಡಾಕ್ಕೆ ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಿ ಜನರಿಗೆ ಆರೋಗ್ಯ ಜಾಗೃತಿ ಮೂಡಿಸಿ, ರೋಗಿಗಳ ತಪಾಸಣೆ ಮಾಡಿದರು. ಆರೋಗ್ಯ ಸಿಬ್ಬಂದಿ ಪ್ರಾಣೇಶ, ಬಸವಲಿಂಗ, ಅಶೋಕ ಇತರರಿದ್ದರು.
Published on

ಮುದಗಲ್: ತಲೇಖಾನ್ ಗ್ರಾಪಂ ವ್ಯಾಪ್ತಿಯ ದೇಸಾಯಿ ಭೋಗಾಪುರ ತಾಂಡಾದಲ್ಲಿ ತೀವ್ರ ಜ್ವರ ಪ್ರಕರಣಗಳು ಹೆಚ್ಚಿದ್ದರಿಂದ ಶನಿವಾರ ಟಿಎಚ್‌ಒ ಅಮರೇಶ ಪಾಟೀಲ್ ನೇತೃತ್ವದ ತಂಡ ಭೇಟಿ ನೀಡಿ, ಜನರಿಗೆ ಆರೋಗ್ಯ ಜಾಗೃತಿ ಮೂಡಿಸಿದರು.

ತಾಂಡಾದ ಪ್ರತಿ ಮನೆಗೂ ಭೇಟಿ ನೀಡಿ ಜ್ವರ, ಕೆಮ್ಮು, ನೆಗಡಿ ಕಾಣಿಸಿದರೆ ಆರೋಗ್ಯ ಉಪ ಕೇಂದ್ರದಲ್ಲಿ ಚಿಕಿತ್ಸೆಗೆ ಪಡೆಯುವಂತೆ ಮನವಿ ಮಾಡಿದರು.

ಕಳೆದ ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿರುವ ಪ್ರಕರಣಗಳನ್ನು ಗುರುತಿಸಿ ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸುವಂತೆ, ಜನಸಾಮಾನ್ಯರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮತ್ತು ರೋಗದ ಬಗ್ಗೆ ಮಾಹಿತಿ ನೀಡಬೇಕೆಂದು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಟಿಎಚ್‌ಒ ಸೂಚಿಸಿದರು.

ಫಾಗಿಂಗ್ ಮತ್ತು ಸ್ವಚ್ಛತೆ ಕಾಪಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಾಂಡಾದ ಜನರು ಮನೆ ಸುತ್ತಲಿನಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಆರೋಗ್ಯ ಉಪಕೇಂದ್ರದ ಸಿಬ್ಬಂದಿ ಲೋಕೇಶ, ಶಾಂತಮ್ಮ, ಸಿದ್ದಯ್ಯ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ಆ.16ರಂದು ‘ಮುದಗಲ್ ಬಳಿ ನಾಲ್ಕು ತಾಂಡಾಗಳಲ್ಲಿ ಹೆಚ್ಚಿದ ಜ್ವರ ಪ್ರಕರಣ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net