ಮಂಗಗಳ ಹಾವಳಿ ನಿಯಂತ್ರಿಸಿ

23mdl01
Published on

ಮುದಗಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಇಲಾಖೆ ವಸತಿ ಸಮುಚ್ಛಯದಲ್ಲಿ ಮಂಗಗಳ ಹಾವಳಿ ನಿಯಂತ್ರಿಸಬೇಕೆಂದು ಆಗ್ರಹಿಸಿ ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರಗೆ ಆಸ್ಪತ್ರೆ ಸಿಬ್ಬಂದಿ ಸೋಮವಾರ ಮನವಿ ಸಲ್ಲಿಸಿದರು.

ಸಮುದಾಯ ಆರೋಗ್ಯ ಕೇಂದ್ರದ ಸಿಸಿ ಕ್ಯಾಮರಾ ವೈರ್‌ಗಳನ್ನು ಮಂಗಗಳು ಕಿತ್ತು ಹಾಕುತ್ತಿವೆ. ವಸತಿ ಗೃಹಕ್ಕೆ ನುಗ್ಗಿ ದವಸ-ಧಾನ್ಯಗಳನ್ನು ತಿನ್ನುತ್ತಿವೆ. ಮಕ್ಕಳ ಕೈಯಲ್ಲಿನ ತಿಂಡಿ-ತಿನಿಸುಗಳನ್ನು ಕಸಿದುಕೊಳ್ಳುತ್ತಿವೆ. ಮಂಗಗಳಿಂದ ಅನೇಕ ರೀತಿಯ ಸಮಸ್ಯೆಗಳಾಗುತ್ತಿದ್ದು, ಕೂಡಲೇ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net