ಮಕ್ಕಳಿಗೆ ಪಾಠದಷ್ಟೆ ಆಟವೂ ಅವಶ್ಯ

220722 Kannapurhatti Amadihal Zone Level Sports Event
ಮುದಗಲ್ ಸಮೀಪದ ಕನ್ನಾಪುರಹಟ್ಟಿ ಜೆಎಂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಆಮದಿಹಾಳ ವಲಯ ಮಟ್ಟದ ಕ್ರೀಡಾಕೂಟವನ್ನು ಫಾ.ಅಲ್ಬರ್ಟ್ ಡಿಸಿಲ್ವ ಶುಕ್ರವಾರ ಉದ್ಘಾಟಿಸಿದರು.
Published on

ಮುದಗಲ್: ಶಾಲಾ ಮಕ್ಕಳಿಗೆ ಪಾಠದಷ್ಟೆ ಆಟದ ಅವಶ್ಯ ಇದೆ ಎಂದು ಸರ್ಕಾರಿ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಅಮರೇಶ ನಾಡಗೌಡ ಹೇಳಿದರು.

ಸಮೀಪದ ಕನ್ನಾಪುರಹಟ್ಟಿ ಜೆಎಂಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆಮದಿಹಾಳ ವಲಯ ಮಟ್ಟದ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರೊನಾ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಮತ್ತು ಪ್ರೋತ್ಸಾಹಿಸಲು ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಕ್ರೀಡಾಕೂಟ ಏರ್ಪಡಿಸುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶಕುಂತಲಾ, ಸಿಆರ್‌ಪಿ ಮಂಜುನಾಥ, ಜೆಎಂಜೆ ಶಾಲೆಯ ಮುಖ್ಯಶಿಕ್ಷಕಿ ಅನಿತಾ, ಫಾ.ಅಲ್ಬರ್ಟ್ ಡಿಸಿಲ್ವ, ಸಿಸ್ಟರ್ ಚಿನ್ನಮ್ಮ, ಶೋಭಾ ಬಿರಾದಾರ್, ಸುಗೂರಯ್ಯ ಹಿರೇಮಠ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net