ಬೆಳ್ಳಿಹಾಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಕ್ರಮ

Mudagal school flowup
ಬೆಳ್ಳಿಹಾಳ ಗ್ರಾಮದಲ್ಲಿ ಜಿಎಲ್‌ಆರ್ ಕಂಪನಿಯವರು ತಾತ್ಕಾಲಿಕ ಶೆಡ್ ನಿರ್ಮಿಸಲು ಮತ್ತು ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಮುಂದಾಗಿರುವುದು.
Published on

ಮುದಗಲ್: ಆಮದಿಹಾಳ ಗ್ರಾಪಂ ವ್ಯಾಪ್ತಿಯ ಬೆಳ್ಳಿಹಾಳ ಗ್ರಾಮದಲ್ಲಿ ಶಾಲೆ ತೆರವಿಗೂ ಮುನ್ನ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಲು ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಜಿ.ಎಲ್.ಆರ್. ಕಂಪನಿ ಮುಂದಾಗಿದೆ.

ಹೆದ್ದಾರಿ ಕಾಮಗಾರಿಗೆ ಶಾಲೆ ತೆರವುಗೊಳಿಸ ಬೇಕಿದೆ. ಆದರೆ, ಷರತ್ತಿನಂತೆ ಶಾಲೆ ಮಕ್ಕಳಿಗೆ ಪಾಠ, ಪ್ರವಚನ ಮಾಡಲು ಜಿಎಲ್‌ಆರ್ ಕಂಪನಿ ಶೆಡ್ ನಿರ್ಮಿಸಿ ಕೊಡಬೇಕಿತ್ತು. ಆದರೆ, ವಿಳಂಬ ಮಾಡಿದ್ದರಿಂದ ಸ್ಥಳೀಯರು, ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು. ಶೆಡ್ ನಿರ್ಮಿಸಿ ಕೊಟ್ಟ ಬಳಿಕ ಶಾಲೆ ತೆರವಿಗೆ ಅವಕಾಶ ನೀಡಲಾಗುವುದು ಎಂದು ಪಟ್ಟು ಹಿಡಿದಿದ್ದರು. ಅಲ್ಲದೆ ಶಾಸಕ ಮಾನಪ್ಪ ವಜ್ಜಲ್ ಅವರು ಸಹ ಕಂಪನಿಗೆ ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಕುರಿತು ವಿಜಯವಾಣಿ ಅ.11ರಂದು ‘ಶಾಲೆಗೆ ಕಂಟಕ ಹೆದ್ದಾರಿ ಕಾಮಗಾರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಗುತ್ತಿಗೆ ಕಂಪನಿ, ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಕ್ರಮವಹಿಸಿದೆ. ಸೋಮವಾರ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ತಾತ್ಕಾಲಿಕ ಶೆಡ್ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ತ್ವರಿತಗತಿಯಲ್ಲಿ ಶೆಡ್ ನಿರ್ಮಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೋಮವಾರ ಲಿಂಗಸುಗೂರು ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಸದಸ್ಯ ರಾಘವೇಂದ್ರ ಕುದುರಿ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net