ಮುದಗಲ್‌ನಲ್ಲಿ ಬಸವೇಶ್ವರ ಜಾತ್ರೆ ಸಂಪನ್ನ

Untitled design
Published on

ಮುದಗಲ್: ಪಟ್ಟಣದ ಕುಂಬಾರಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಬುಧವಾರ ಶ್ರದ್ಧ ಭಕ್ತಿಯಿಂದ ಸಂಪನ್ನಗೊಂಡಿತು.

ನಂದವಾಡಗಿಯ ಅಭಿನವ ಚನ್ನಬಸವ ಶ್ರೀಗಳ ಸಾರಥ್ಯದಲ್ಲಿ ಕಳೆದ 11ದಿನಗಳಿಂದ ದೇವಸ್ಥಾನ ಆವರಣದಲ್ಲಿ ಸಜ್ಜಲಗುಡ್ಡದ ಶಿವಶರಣೆ ಶರಣಮ್ಮ ತಾಯಿ ಪುರಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬುಧವಾರ ಬೆಳಗ್ಗೆ ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ರುದ್ರಾಭಿಷೇಕ ಸೇರಿ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ನಂತರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ನಡೆಯಿತು. ಅನೇಕ ಕಲಾ ತಂಡಗಳೊಂದಿಗೆ 251 ಪೂರ್ಣ ಕುಂಭಗಳನ್ನು ಸುಮಂಗಲೆಯರು ಹೊತ್ತು ಸಾಗಿದರು.

ದೇಗುಲದ ಸಮಿತಿ ಅಧ್ಯಕ್ಷ ಮಲ್ಲಣ್ಣ ಮಾಟೂರು, ಪ್ರಮುಖರಾದ ಸಿದ್ದಯ್ಯ ಸ್ವಾಮಿ ಸಾಲಿಮಠ, ಬಸವರಾಜ ಬಳಿಗಾರ, ಸುರೇಂದ್ರಗೌಡ ಪಾಟೀಲ್, ಶರಣಪ್ಪ ಸಜ್ಜನ, ಪ್ರಭು ಕಂಡಕ್ಟರ್, ಬಸವರಾಜ ಚಟ್ಟೇರ, ಮಹಾಂತೇಶ ಗದ್ದಿ, ನಾಗರಾಜ ದಫೇದಾರ, ಸಂಗಪ್ಪ ಕೊಡೆಕಲ್, ವೀರಭದ್ರಯ್ಯ ಮೂಲಿಮನಿ, ಅಮರೇಶ ಹೊನ್ನಳ್ಳಿ, ಗಂಗಾಧರ ಮಡಿವಾಳ, ಶಿವಾನಂದ ಸುಂಕದ, ಲಿಂಗಪ್ಪ ಹಣಗಿ, ಮಹೇಶ ವಸ್ತ್ರದ್, ಈರಪ್ಪ ಗುಡೂರು, ಶಶಿಕಲಾ ಭೋವಿ, ತೋಟಮ್ಮ ಮುದಗಲ್, ಲಕ್ಷ್ಮೀ ಕೋರಿಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net