ಮುದಗಲ್‌ನಲ್ಲಿಲ್ಲ ಬಂದ್‌ಗೆ ಬೆಂಬಲ

28092020 Mudgal APMC
Published on

ಮುದಗಲ್: ಬಂದ್‌ಗೆ ಪಟ್ಟಣದಲ್ಲಿ ಬೆಂಬಲ ಸಿಗದೇ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು. ಎಪಿಎಂಸಿಯಲ್ಲಿ ಹಮಾಲಿಗಳು, ಕೂಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ವಾರದ ಸಂತೆ ಸೋಮವಾರ ಇದ್ದುದರಿಂದ ಸಾಪ್ತಾಹಿಕ ವಹಿವಾಟು ಅಡೆತಡೆಯಿಲ್ಲದೆ ನಡೆಯಿತು.

ಬಸ್ ಸಂಚಾರ ವಿರಳವಾಗಿದ್ದರೆ, ಖಾಸಗಿ ವಾಹನಗಳ ಓಡಾಟ ಅಬಾಧಿತವಾಗಿತ್ತು. ಬಂದ್‌ಗೆ ಸ್ಥಳೀಯ ಯಾವುದೇ ಸಂಘಟನೆ ಬೆಂಬಲ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ಕಿರಾಣಿ ಅಂಗಡಿ, ಹೋಟೆಲ್, ಹಣ್ಣು, ತರಕಾರಿ ಸೇರಿ ಬಹುತೇಕ ವ್ಯಾಪಾರ, ವಹಿವಾಟು ಎಂದಿನಂತೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net