ಪರಿಸರ ಸ್ವಚ್ಛತೆಗಾಗಿ ಶ್ರಮಿಸಿ- ಪಿಡಿಒ ದಸ್ತಗಿರಿಸಾಬ್ ಬಡಿಗೇರ್ ಸಲಹೆ

150223 Mudenuru Amrutha Abhiyana
ಮುದೇನೂರು ಗ್ರಾಪಂನಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮಕ್ಕೆ ಪಿಡಿಒ ದಸ್ತಗಿರಿಸಾಬ್ ಬಡಿಗೇರ್ ಮಂಗಳವಾರ ಚಾಲನೆ ನೀಡಿದರು.
Published on

ಮುದೇನೂರು: ಪೌಷ್ಟಿಕ ಆಹಾರ ಸೇವಿಸಿ ಜನರು ಆರೋಗ್ಯಯುತ ಜೀವನ ನಡೆಸಬೇಕು ಎಂದು ಗ್ರಾಪಂ ಪಿಡಿಒ ದಸ್ತಗಿರಿಸಾಬ್ ಬಡಿಗೇರ್ ಹೇಳಿದರು. ಗ್ರಾಪಂನಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ರೋಗಗಳ ಲಕ್ಷಣ ಕಂಡು ಬಂದಾಗ ಚಿಕಿತ್ಸೆ ಪಡೆದುಕೊಳ್ಳಬೇಕು. ಸುತ್ತಮುತ್ತಲಿನ ಪರಿಸರ ಶುಚಿತ್ವಕ್ಕಾಗಿ ಪಣ ತೊಡಬೇಕು ಎಂದರು. ಆರೋಗ್ಯ ಇಲಾಖೆ ಅಧಿಕಾರಿ ಚಿದಂಬರ ಜ್ಯೋಶಿ ಮಾತನಾಡಿದರು. ಗ್ರಾಪಂ ಸದಸ್ಯರಾದ ಹುಸೇನಪ್ಪ ಹಿರೇಮನಿ, ಶರಣಗೌಡ ಕಡ್ಲೂರು, ಗೀತಾ ಕುಷ್ಟಗಿ, ಸಂಗಪ್ಪ ವಾಲೇಕಾರ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net