

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಅನಂತಪೂರ ಗ್ರಾಪಂ ವ್ಯಾಪ್ತಿಯ ಚಂದ್ರಪ್ಪವಾಡಿ ಗ್ರಾಮದ ನಿಕ್ಕಂ ಹಾಗೂ ನರೋಟೆ ತೋಟದ ವಸತಿ ಪ್ರದೇಶದ ಸಂಪರ್ಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಅನಂತಪೂರ ಗ್ರಾಮದಿಂದ ಐದು ಕಿ.ಮೀ ಅಂತರದಲ್ಲಿ ಚಂದ್ರಪ್ಪವಾಡಿ ಗ್ರಾಮವಿದ್ದು, ಜಿಟಿ-ಜಿಟಿ ಮಳೆಯಿಂದ ಜನರು ಹಾಗೂ ಶಾಲಾ ಮಕ್ಕಳು ಗ್ರಾಮದ ಕಡೆಗೆ ಆಗಮಿಸಬೇಕಾದರೆ ಕೆಸರಿನಲ್ಲೇ ಸಂಚರಿಸುವಂತಾಗಿದೆ.
ಮೂರು ತಲೆಮಾರುಗಳಿಂದ ನಿಕ್ಕಂ ಹಾಗೂ ನರೋಟೆ ತೋಟದ ವಸತಿಯಿಂದ ಚಂದ್ರಪ್ಪವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಿಲ್ಲ. ಅನಂಪುರ ಗ್ರಾಪಂನಿಂದ ಕೆಲಸ ಆಗದ ಹಿನ್ನೆಲೆಯಲ್ಲಿ ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾಕಷ್ಟು ಸಲ ತೊಂದರೆಯಾಗಿದೆ.
ತೋಟದ ವಸತಿ ನಿವಾಸಿಗಳೇ ಮುರಮ್ ಹಾಕಿ ರಸ್ತೆ ನಿರ್ಮಾಣ ಮಾಡಲು ಹೋದರೆ ಅಥಣಿ ತಹಸೀಲ್ದಾರ್ ಅನುವು ಮಾಡಿಕೊಡುತ್ತಿಲ್ಲ. ಹೀಗಾಗಿ ತಾವಾದರೂ ರಸ್ತೆಯನ್ನು ನಿರ್ಮಿಸಿಕೋಡಿ ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರೂ ಇಲ್ಲಿಯವರೆಗೆ ಇತ್ತ ಯಾವೊಬ್ಬ ಅಕಾರಿಗಳೂ ಗಮನಹರಿಸಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಕಾರಿಗಳು ಇತ್ತ ಗಮನಹರಿಸಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈಗಾಗಲೇ ರಸ್ತೆ ಸಂಚಾರ ಮಾರ್ಗ ಪರಿಶೀಲನೆ ಮಾಡಲಾಗಿದ್ದು, ತಹಸೀಲ್ದಾರ್‌ಗೆ ಮಾಹಿತಿ ನೀಡಲಾಗುವುದು. ರಸ್ತೆಗೆ ಅಡ್ಡಲಾಗಿ ಅಗ್ರಾಣಿ ಹಳ್ಳ ಇರುವುದರಿಂದ ಹಳ್ಳಕ್ಕೆ ಸೇತುವೆ ನಿರ್ಮಾಣವಾಗಬೇಕು. ಅದು ಅನಂತಪುರ ಗ್ರಾಪಂನಿಂದ ಮಂಜೂರಾಗಿದೆ. ಸೇತುವೆ ನಿರ್ಮಿಸುವವರೆಗೆ ಗರಸು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅನಂತಪುರ ಪಿಡಿಒಗೆ ಸೂಚಿಸಲಾಗುವುದು. ಅಮಿತ ಢವಳೇಶ್ವರ. ಉಪತಹಸೀಲ್ದಾರ್ ಅನಂತಪುರ
ಅಮಿತ ಢವಳೇಶ್ವರ. ಉಪತಹಸೀಲ್ದಾರ್ ಅನಂತಪುರ