ಕಕ್ಕುಂದಕಾಡಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟ

9-npk,6,
ಕಕ್ಕುಂದಕಾಡಿನ ಶ್ರೀ ವೆಂಕಟೇಶ್ವರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಕ್ಕುಂದ ಕಾಡುವಿನಲ್ಲಿರುವ ಬಾಳೆಯಡ ಶ್ಯಾಮ್ ಮಂದಪ್ಪ ಅವರ ಗದ್ದೆಯಲ್ಲಿ ಸಾರ್ವಜನಿಕರಿಗೆ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
Published on

ನಾಪೋಕ್ಲು: ಸಮೀಪದ ಕಕ್ಕುಂದಕಾಡಿನ ಶ್ರೀ ವೆಂಕಟೇಶ್ವರ ಗಣಪತಿ ಸೇವಾ ಸಮಿತಿಯ ವತಿಯಿಂದ ಬಾಳೆಯಡ ಶ್ಯಾಮ್ ಮಂದಪ್ಪ ಅವರ ಗದ್ದೆಯಲ್ಲಿ ಭಾನುವಾರ ಸಾರ್ವಜನಿಕರಿಗೆ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಬಾಳೆಯಡ ಶಾರದಾ ಸುಬ್ರಮಣಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶುಭ ಹಾರೈಸಿದರು. ಸಾರ್ವಜನಿಕರಿಗೆ ಆಯೋಜಿಸಿದ್ದ ಪುರುಷರ ಕಬಡ್ಡಿಯಲ್ಲಿ ಬೆಟ್ಟಗಿರಿ ತಂಡ ಪ್ರಥಮ, ಇಂದಿರಾನಗರದ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಹಗ್ಗ ಜಗ್ಗಾಟದಲ್ಲಿ ಬೆಟ್ಟಗೆರಿ ತಂಡ ಮೊದಲ ಸ್ಥಾನ ಮತ್ತು ವೆಂಕಟರಮಣ ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಮಹಿಳಾ ಹಗ್ಗ ಜಗ್ಗಾಟದಲ್ಲಿ ಚೆರಿಯಾಪರಂಬು ತಂಡ ಮೊದಲ ಸ್ಥಾನ, ವೆಂಕಟರಮಣ ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ.

ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ವೆಂಕಟೇಶ್ವರ ದೇವಾಲಯದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net