ಕೆಸರುಗದ್ದೆಯಾದ ಅಜ್ರವಳ್ಳಿ ರಸ್ತೆ

4 nrp 1 (1)
ಸೀತೂರು ಗ್ರಾಪಂನ ಅಜ್ರವಳ್ಳಿ ರಸ್ತೆ ಮಧ್ಯೆ ಜಲ ಎದ್ದು ರಸ್ತೆ ಕೆಸರುಮಯವಾಗಿರುವುದು.
Published on

ಎನ್.ಆರ್.ಪುರ: ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯಲ್ಲಿ ಮಧ್ಯದಲ್ಲೇ ಜಲ ಎದ್ದು ರಸ್ತೆ ಕೆಸರು ಗದ್ದೆಯಂತಾಗಿರುವುದರಿಂದ ಅಜ್ರವಳ್ಳಿಯ 12 ಮನೆಗಳಿಗೆ ಹೋಗಲು ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸೀತೂರು ಗ್ರಾಮದ ಅಜ್ರವಳ್ಳಿ, ಮಾವಿನ ಹಿತ್ತಲು ಹೋಗಲು ನಾಗರಮಕ್ಕಿ-ಯಡಗೆರೆ ರಸ್ತೆಯಿಂದ 2 ಕಿ.ಮೀ.ದೂರ ಸಾಗಬೇಕು. ಈ ಭಾಗದಲ್ಲಿ 12 ಮನೆಗಳಿವೆ. ಮಳೆಯಾದ ವರ್ಷದಲ್ಲಿ ಅಜ್ರವಳ್ಳಿ ಸಮೀಪದ ರಸ್ತೆ ಮಧ್ಯದಲ್ಲಿ ಜಲ ಏಳುತ್ತದೆ. ಈ ವರ್ಷ ಭಾರಿ ಮಳೆಯಾಗಿ ಜಲ ಎದ್ದು ಅಂದಾಜು 600 ಮೀಟರ್ ಉದ್ದದ ರಸ್ತೆ ಕೆಸರುಮಯವಾಗಿದೆ. ಯಾವುದೇ ವಾಹನ ಈ ಕೆಸರು ದಾಟಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಕಳೆದ 15 ದಿನದಿಂದ ಗ್ರಾಮಸ್ಥರು ತಮ್ಮ ವಾಹನಗಳನ್ನು ಅರ್ಥ ಕಿ.ಮೀ.ದೂರದಲ್ಲಿ ತಾತ್ಕಾಲಿಕ ಶೆಡ್ ಮಾಡಿ ಅಲ್ಲಿ ವಾಹನ ನಿಲ್ಲಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಈ ಜಾಗದಲ್ಲಿ ಪದೇ, ಪದೇ ಜಲ ಏಳುವುದರಿಂದ ಕನಿಷ್ಠ ಜಲ ಏಳುವ ಜಾಗದ 600 ಮೀಟರ್ ಉದ್ದದ ರಸ್ತೆಗೆ ಕಾಂಕ್ರೀಟ್ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net