

ಮಂಗಳೂರು: ಮಂಗಳೂರು ದಸರಾ ಮಹೋತ್ಸವ ಅಂಗವಾಗಿ ಶರಧಿ ಪ್ರತಿಷ್ಠಾನ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಅ.6ರಂದು ಬೆಳಗ್ಗೆ 10ರಿಂದ ಸಾಯಂಕಾಲ 7ರವರೆಗೆ ಮುದ್ದುಶಾರದೆ ಮತ್ತು ನವದುರ್ಗ ವೇಷ ಸ್ಪರ್ಧೆ ಆಯೋಜಿಸಲಾಗಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸ್ಪರ್ಧೆ ನಡೆಯಲಿದ್ದು, ಹೆಸರು ನೋಂದಾಯಿಸಲು ಬಿಜೈನಲ್ಲಿರುವ ಪುನೀಕ್ ಸ್ಟುಡಿಯೋವನ್ನು ಸಂಪರ್ಕಿಸಬಹುದು. ಹೆಸರು ನೋಂದಾಯಿಸಲು (8073214624, 7090777241). ಹೆಸರು ನೋಂದಾವಣೆಗೆ ಅ.1 ಕೊನೆ ದಿನವಾಗಿದೆ. 1ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಮುದ್ದು ಶಾರದೆ ಮತ್ತು ನವದುರ್ಗೆ ವೇಷಸ್ಪರ್ಧೆ ನಡೆಯಲಿದೆ. ಮಗುವಿಗೆ ಮುದ್ದುಶಾರದೆ ಅಥವಾ ನವದುರ್ಗೆಯರ ಯಾವುದಾದರೂ ಒಂದು ವೇಷ ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ನೀಡಿರುವ 2 ನಿಮಿಷ ಕಾಲಾವಕಾಶದಲ್ಲಿ ಸ್ತಬ್ಧಚಿತ್ರ, ನೃತ್ಯ, ಅಭಿನಯ, ಶ್ಲೋಕ, ಅಥವಾ ಹಾಡುಗಳನ್ನು ಸ್ಪರ್ಧಿಗಳು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಆಯೋಜಕರಾದ ಪುನೀಕ್ ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.