ಶ್ರೀಶೈಲ ಭಕ್ತರಿಗೆ ಬಸ್ ಸೇವೆ

MBL-10-4
Published on

ಮುದ್ದೇಬಿಹಾಳ: ಈ ಭಾಗದ ಭಕ್ತರು ಶ್ರೀಶೈಲ ಜಾತ್ರೆಗೆ ತೆರಳಿದ್ದು ಮರಳಿ ಊರಿಗೆ ಬರಲು ಬಸ್ ವ್ಯವಸ್ಥೆ ಇಲ್ಲದೆ ತೊಂದರೆಗೆ ಸಿಲುಕಿರುವುದನ್ನು ಮನಗಂಡಿರುವ ಸಾರಿಗೆ ಘಟಕದ ಅಧಿಕಾರಿಗಳು ಕೆಲ ಸಾರಿಗೆ ನೌಕರರ ಮನವೊಲಿಸಿ ಶ್ರೀಶೈಲದಲ್ಲಿರುವ ಭಕ್ತರನ್ನು ಕರೆ ತರಲು ಬಸ್ ವ್ಯವಸ್ಥೆ ಕೈಗೊಳ್ಳುವಲ್ಲಿ ಸಲರಾಗಿದ್ದಾರೆ.

ಸಾರಿಗೆ ನೌಕರರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸುವ ಮೂನ್ಸೂಚನೆ ನೀಡುತ್ತಿರುವ ಹಿನ್ನೆಲೆ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಶನಿವಾರ ಪಟ್ಟಣದಲ್ಲಿ ಕೆಲವು ಸಾರಿಗೆ ನೌಕರರು ಸೇವೆಗೆ ಹಾಜರಾಗುತ್ತಿರುವುದು ಕಂಡು ಬಂತು.

ಪಟ್ಟಣದ ಸಾರಿಗೆ ಘಟಕದಲ್ಲಿ ಕಳೆದ ಮೂರು ದಿನಗಳಿಂದ ತಮ್ಮ ೆನ್‌ಗಳನ್ನು ಸ್ವಿಚ್ ಆ್ ಮಾಡಿಕೊಂಡಿದ್ದ ಸಾರಿಗೆ ನೌಕರರು, ಶನಿವಾರ ಸೇವೆಗೆ ಹಾಜರಾಗುವ ಬಗ್ಗೆ ಒಲವು ತೋರುತ್ತಿದ್ದಾರೆ ಎಂದು ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ತಿಳಿಸಿದ್ದಾರೆ.

ಏತನ್ಮಧ್ಯೆ ಪಟ್ಟಣದ ಸಾರಿಗೆ ಘಟಕದಿಂದ ಶುಕ್ರವಾರ ರಾತ್ರಿ ಮೂರು ಬಸ್‌ಗಳು ಶ್ರೀಶೈಲಗೆ ತೆರಳಿದ್ದು, ಶನಿವಾರ ಬೆಳಗ್ಗೆ ನಾಲತವಾಡ,ನಾರಾಯಣಪುರ ಮಾರ್ಗದಲ್ಲಿ ಒಂದು ಬಸ್ ಕಾರ್ಯಾಚರಣೆ ನಡೆಸಿದೆ. ಈ ಮಧ್ಯೆ ಗೋವಾದಿಂದ ಕದಂಬ ಬಸ್ ಪ್ರಯಾಣಿಕರನ್ನು ಮುದ್ದೇಬಿಹಾಳಕ್ಕೆ ಕರೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net