ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಸುಗಮ

MBL-24-4
Published on

ಮುದ್ದೇಬಿಹಾಳ: ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಬುಧವಾರ ಪಟ್ಟಣದ ಮೂರು ಪರೀಕ್ಷೆ ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.

ಜ್ಞಾನ ಭಾರತಿ ಪರೀಕ್ಷೆ ಕೇಂದ್ರದಲ್ಲಿ 389, ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ಕೇಂದ್ರದಲ್ಲಿ 302 ಹಾಗೂ ಎಸ್.ಎಸ್. ಶಿವಾಚಾರ್ಯ ಪರೀಕ್ಷೆ ಕೇಂದ್ರದಲ್ಲಿ 422 ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಕೇಂದ್ರಗಳಿಗೆ ಪಿಯು ಕಾಲೇಜಿನ ಪ್ರಾಚಾರ್ಯರನ್ನು ಅಧೀಕ್ಷಕರಾದ ಪ್ರೊ.ರಮೇಶ ಲಮಾಣಿ, ಪ್ರೊ.ಎ.ಟಿ. ಹೆರಕಲ್, ಪ್ರೊ. ಕಮತರ ಅವರನ್ನು ನೇಮಿಸಲಾಗಿತ್ತು. ಪಟ್ಟಣದ ಜ್ಞಾನ ಭಾರತಿ ಪರೀಕ್ಷೆ ಕೇಂದ್ರಕ್ಕೆ ಬಿಇಒ ವೀರೇಶ ಜೇವರಗಿ ಭೇಟಿ ನೀಡಿ ಪರೀಕ್ಷೆ ಚಟುವಟಿಕೆ ಅವಲೋಕಿಸಿದರು.

ಗೊಂದಲ: ವಿದ್ಯಾರ್ಥಿಗಳಿಗೆ ಕೊಟ್ಟಿದ್ದ ಒಎಂಆರ್ ಶೀಟ್‌ನಲ್ಲಿ ಜನ್ಮ ದಿನಾಂಕ, ತಿಂಗಳು, ವರ್ಷ ನಮೂದಿಸಲು ಕಾಲಂಗಳನ್ನು ಕೊಟ್ಟಿದ್ದರೆ ಹಾಲ್ ಟಿಕೆಟ್‌ನಲ್ಲಿ ಮೊದಲು ತಿಂಗಳು, ನಂತರ ವರ್ಷ ಹಾಗೂ ದಿನ ನಮೂದಿಸಲು ತಿಳಿಸಿದ್ದು ಕೆಲವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಯಿತು. ಪರೀಕ್ಷೆ ಕೇಂದ್ರದ ಸೂಪರ್‌ವೈಸರ್ ಹಾಗೂ ಅಧೀಕ್ಷಕರು ಇದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಸಮಸ್ಯೆ ಆಗದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net