ತಬ್ಬಲಿ ಮಕ್ಕಳಿಗೆ ಮಿಡಿದ ಶಾಸಕ ನಡಹಳ್ಳಿ

MBL-28-2
Published on

ಮುದ್ದೇಬಿಹಾಳ: ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ದಂಪತಿ ಎರಡು ಮಕ್ಕಳು ಅನಾಥವಾಗಿದ್ದನ್ನು ತಿಳಿದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಒಂದು ಲಕ್ಷ ರೂ.ವೈಯಕ್ತಿಕ ಪರಿಹಾರದ ಚೆಕ್‌ನ್ನು ಶನಿವಾರ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಯರಗಲ್ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಶಾಸಕರು ಆಗಮಿಸಿದ್ದ ವೇಳೆ ತಾಯಿಯ ತವರು ಮನೆಯಾದ ಯರಗಲ್ ಗ್ರಾಮದ ಅಜ್ಜನ ಮನೆಯಲ್ಲಿ ಆಸರೆ ಪಡೆದಿರುವ ಎರಡು ವರ್ಷದ ಸುಜೀತ ಪಾಟೀಲ ಹಾಗೂ ಐದು ವರ್ಷದ ಸುಪ್ರೀತ ಪಾಟೀಲನ ಭವಿಷ್ಯದ ಸಹಾಯಕ್ಕೆ ಶಾಸಕರು ಒಂದು ಲಕ್ಷ ರೂ.ಚೆಕ್‌ನ್ನು ಮಕ್ಕಳ ಅಜ್ಜ ಬಸವರಾಜ ಕತ್ತಿ ಅವರಿಗೆ ನೀಡಿದರು. ಸಾಧಕರಾದ ಸಂಗಮೇಶ ಶಿವಣಗಿ, ಬಸವರಾಜ ಹಡಪದ, ಶಿಕ್ಷಕಿ ಶಿವಲೀಲಾ ಕಡಿ ಅವರನ್ನು ಸನ್ಮಾನಿಸಿದರು.

ತಾಳಿಕೋಟೆ ತಾಪಂ ಅಧ್ಯಕ್ಷ ರಾಜುಗೌಡ ಕೋಳೂರ, ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಮತ್ತಿರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net