

ಮುದ್ದೇಬಿಹಾಳ: ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಸಂಚರಿಸುವ ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ಪಟ್ಟಣದಲ್ಲಿ ಯಮಧರ್ಮ, ಚಿತ್ರಗುಪ್ತ ಹಾಗೂ ಕರೊನಾ ವೈರಸ್ ವೇಷಧಾರಿಗಳು ಮಂಗಳವಾರ ಕೋವಿಡ್-19 ಭೀಕರತೆ ಅರಿವು ಮೂಡಿಸುವ ಮಾಸ್ಕ್ ಜಾಗೃತಿ ಅಭಿಯಾನ ನಡೆಸಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ಕುಮಾರೇಶ್ವರ ಜೀವನ ವಿಕಾಸ ೌಂಡೇಷನ್, ಪೊಲೀಸ್ ಇಲಾಖೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಲಾ ಸಿಂಚನ ಬಳಗದ ಕಲಾವಿದರ ತಂಡದಿಂದ ಕರೊನಾ ನಿಯಂತ್ರಣ ಕುರಿತ ಜನ ಜಾಗೃತಿ ಬೀದಿ ನಾಟಕದ ರೂಪಕ ನಡೆಸಲಾಯಿತು.
ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜೀವ ಉಳಿಸಿಕೊಳ್ಳಲು ಮಾಸ್ಕ್ ಹಾಕಿಕೊಂಡು ಪರಸ್ಪರ ಅಂತರ ಕಾಯ್ದುಕೊಂಡು ಕುಟುಂಬವನ್ನು ಅಕ್ಕಪಕ್ಕದವರನ್ನು ಕಾಪಾಡುವಂತೆ ತಿಳಿ ಹೇಳಲಾಯಿತು.
ಕಲಾವಿದ ಗೋಪಾಲ ಹೂಗಾರ ಯಮಧರ್ಮ, ಚಿತ್ರಗುಪ್ತನಾಗಿ ದಾದಾಪೀರ್ ಹಡಲಗೇರಿ, ಯಮಕಿಂಕರರಾಗಿ ನಂದನಗೌಡ ಬಿದರಕುಂದಿ, ಗಣೇಶ ಗೌಂಡಿ, ಮುತ್ತು ನಿಡಗುಂದಿ, ಕರೊನಾ ವೈರಸ್ ಆಗಿ ಾರೂಕ್ ಮುರಾಳ ವೇಷಧಾರಿಗಳಾಗಿ ಜನರಿಗೆ ವೈರಸ್ ಬಗ್ಗೆ ತಿಳಿವಳಿಕೆ ನೀಡಿದರು.
ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದ ಕುಂಟೋಜಿ ಚನ್ನವೀರ ದೇವರು, ಜೀವ ಇದ್ದರೆ ಜೀವನ. ಹತ್ತು ರೂಪಾಯಿ ಮಾಸ್ಕ್ ಬೆಲೆ ಕಟ್ಟಲಾಗದ ಜೀವವನ್ನು ಉಳಿಸುತ್ತದೆ. ಯಾರೂ ಅಲಕ್ಷೃ ಮಾಡದೆ ಮಾಸ್ಕ್ ಧರಿಸಿ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದರು.
ಕರೊನಾ ಎರಡನೇ ಅಲೆಯ ರಣಕೇಕೆ ನಿಯಂತ್ರಿಸುವುದು ಹೇಗೆ, ಮಾಸ್ಕ್ ಧರಿಸುವ ಮಹತ್ವ ಮುಂತಾದವುಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಪೊಲೀಸರಿಂದಲೂ ಜಾಗೃತಿ
ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಎಂ.ಬಿ. ಬಿರಾದಾರ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದಲೂ ಮಾಸ್ಕ್ ಜಾಗೃತಿ ಅಭಿಯಾನ ನಡೆಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ೌಂಡೇಷನ್ ಸದಸ್ಯ ಮಹಾಂತೇಶ ಬೂದಿಹಾಳಮಠ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಬಿ. ವಡವಡಗಿ, ತಾಲೂಕು ಅಧ್ಯಕ್ಷ ಎ.ಎಲ್. ಮುಲ್ಲಾ, ಪ್ರಧಾನ ಕಾರ್ಯದರ್ಶಿ ಸಿದ್ದು ಚಲವಾದಿ, ಪದಾಧಿಕಾರಿಗಳಾದ ಪರಶುರಾಮ ಕೊಣ್ಣೂರ, ಲಾಡ್ಲೇಮಶ್ಯಾಕ್ ನದಾಫ್, ರವೀಂದ್ರ ನಂದೆಪ್ಪನವರ್, ಬಸವರಾಜ ಹುಲಗಣ್ಣಿ, ಚೇತನ್ ಕೆಂಧೂಳಿ, ೌಂಡೇಷನ್ ಸದಸ್ಯರಾದ ಮುತ್ತು ವಡವಡಗಿ, ಚೇತನ್ ಶಿವಶಿಂಪಿ, ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ, ಎಬಿವಿಪಿ ಹಿರಿಯ ಧುರೀಣ ಉದಯಸಿಂಗ್ ರಾಯಚೂರ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಮಾಸ್ಕ್, ಮೊಳಕೆ ಕಾಳು ಪಾಕೆಟ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ ಚಾಲಕ ರಹೆಮಾನ ಮ್ಯಾಗೇರಿ, ಸಮಾಜ ಸೇವಕ ಸಿದ್ದನಗೌಡ ಪಾಟೀಲ ಅವರ ಸೇವೆ ಶ್ಲಾಸಲಾಯಿತು. ೌಂಡೇಷನ್ ಸದಸ್ಯ ಶಿವಕುಮಾರ ಶಾರದಳ್ಳಿ ನಿರೂಪಿಸಿ ನಿಯಮಗಳ ಅರಿವು ಮೂಡಿಸಿದರು.