ವಾರ್ಡ್‌ವಾರು ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ

mbl-27-3
Published on

ಮುದ್ದೇಬಿಹಾಳ: ಪಟ್ಟಣದಲ್ಲಿ ಶುಕ್ರವಾರ ಕೋವಿಡ್ ವ್ಯಾಕ್ಸಿನೇಷನ್ ಮೇಳಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಕಿಲ್ಲಾಗಲ್ಲಿ/ಅವಟಿಗಲ್ಲಿ ಹಾಗೂ ಇಂದಿರಾನಗರ ಮತ್ತು ಹೊರಪೇಟೆಗಲ್ಲಿಯಲ್ಲಿ ಕೋವಿಡ್ ಲಸಿಕಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಇಂದಿರಾನಗರದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ಪ ಹರಿಜನ(ಶಿವಪುರ) 2ನೇ ಹಂತದ ಲಸಿಕೆ ಪಡೆದುಕೊಂಡು ಮೇಳಕ್ಕೆ ಚಾಲನೆ ನೀಡಿ ತಮ್ಮ ವಾರ್ಡ್‌ನಲ್ಲಿ ಸ್ವತಃ ತಾವೇ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಮನೆ ಮನೆಗೆ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಜನರಿಗೆ ತಿಳಿ ಹೇಳಿದರು.

ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಶಿ, ನಸಿರ್ಂಗ್ ಆಫೀಸರ್ಸ್‌ಗಳಾದ ಮಹಮ್ಮದ ರಫೀಕ್ ಬಾಗವಾನ, ವಿಠ್ಠಲ ಖಿಲಾರಟ್ಟಿ, ಆರ್.ಎನ್. ಖಾಜಿ, ಹನುಮಗೌಡ ಬಿರಾದಾರ, ಸುವರ್ಣಾ ಜಾವೂರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ, ಸಲ್ಮಾ ನದಾಫ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಸುನಂದಾ ಖ್ಯಾತಣ್ಣವರ, ಉಮಾ ಶಾರದಳ್ಳಿ, ಗುರುಬಾಯಿ ತೊಂಡಿಹಾಳ, ಸುನಂದಾ ಮಡಿವಾಳರ, ಕವಿತಾ ಅರಳದಿನ್ನಿ, ಸಿಬ್ಬಂದಿ ಚಿನ್ನಪ್ಪ ಬರ್ಮಗೌಡರ, ಯಮನಪ್ಪ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net