ಲಸಿಕೆ ಪಡೆದ ಜಿಪಂ ಉಪಾಧ್ಯಕ್ಷ ದೇಸಾಯಿ

MBL-22-1
Published on

ಮುದ್ದೇಬಿಹಾಳ: ಕರೊನಾ ವೈರಸ್ ದೂರವಿಡಲು ಹಿರಿಯ ನಾಗರಿಕರಾದಿಯಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡು ಸುರಕ್ಷಿತರಾಗಿರಬೇಕೆಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮೊದಲ ಹಂತದ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು ಅವರು ಮಾತನಾಡಿದರು.

ಲಸಿಕೆಯ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಾರೆ. ಆದರೆ, ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಲಾದ ಈ ಲಸಿಕೆಯನ್ನು ವಿಶ್ವದ ಹಲವು ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿವೆ. ಹೀಗಿರುವಾಗ ನಮ್ಮಲ್ಲಿ ದೊರೆಯುವ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುವ ಕೆಲಸ ಹಿರಿಯ ನಾಗರಿಕರಿಂದ ಆಗಬೇಕಿದೆ ಎಂದರು. ಪ್ರಗತಿ ಜೆಸಿ ಸಂಸ್ಥೆ ಅಧ್ಯಕ್ಷ ಸಂಗಮೇಶ ನಾವದಗಿ ಮಾತನಾಡಿದರು.

ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಸಿ, ಡಾ. ವೀರೇಶ ಪಾಟೀಲ, ರಾಜು ಕರೆಡ್ಡಿ, ರಾಜು ಕಲ್ಬುರ್ಗಿ, ಪಾರಸ್ ಪೋರವಾಲ್, ಮುರಳಿಕೃಷ್ಣ ಬುಡ್ಡೋಡಿ, ಅರವಿಂದ ಲದ್ದಿಮಠ, ಆರೋಗ್ಯ ಸಹಾಯಕ ಎಂ.ಎಸ್. ಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net