ಕೊಲೆ ಘಟನೆಗೆ ಖಂಡನೆ

MBL 28-1
Published on

ಮುದ್ದೇಬಿಹಾಳ: ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದ ದಲಿತ ಯುವಕ ಅನೀಲ್ ಇಂಗಳಗಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಕರ್ನಾಟಕ ಮಾದಿಗರ ಸಂಘ ಹಾಗೂ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಹೋರಾಟಗಾರರು ಗ್ರೇಡ್-2 ತಹಸೀಲ್ದಾರ್ ಡಿ.ಜೆ. ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಯುವಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಮಾದಿಗರ ಸಂಘದ ಅಧ್ಯಕ್ಷ ಶೇಖಪ್ಪ ಮಾದರ, ಅಂಬೇಡ್ಕರ್ ಸೇನೆಯ ತಾಲೂಕಾಧ್ಯಕ್ಷ ಪ್ರಕಾಶ ಚಲವಾದಿ, ಮುಖಂಡ ದೇವರಾಜ ಹಂಗರಗಿ, ಮುಖಂಡರಾದ ಮಹಾಂತೇಶ ಢವಳಗಿ, ಮುತ್ತು ಮಾದರ, ಮಂಜುನಾಥ ಮಾದರ, ಪರಶುರಾಮ ಮಾದರ, ರವಿ ಮಾದರ, ಬಸವರಾಜ ಮುದೂರ, ಮಂಜು ಗೆದ್ದಲಮರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net