ಇಂದೂರಿನ ಮಹಾರಾಣಿ ಅಹಲ್ಯಾದೇವಿ ಹೋಳ್ಕರ್ ಜಯಂತಿ

MBL 31-1
Published on

ಮುದ್ದೇಬಿಹಾಳ: ಪಟ್ಟಣದ ಅಭ್ಯುದಯ ಪಿ.ಯು. ಸೈನ್ಸ್ ಕಾಲೇಜಿನಲ್ಲಿ ಇಂದೂರಿನ ಮಹಾರಾಣಿ, ಹೋರಾಟಗಾರ್ತಿ ಅಹಲ್ಯಾದೇವಿ ಹೋಳ್ಕರ್ ಅವರ 295ನೇ ಜಯಂತ್ಯುತ್ಸವನ್ನು ಸರಳವಾಗಿ ಆಚರಿಸಲಾಯಿತು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಮಾತನಾಡಿ, 3115 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ ಹಿಂದು ಧರ್ಮದ ರಕ್ಷಕಿ ಅಹಿಲ್ಯಾದೇವಿ ಸಾಧನೆ ಇಂದಿನ ಜನಾಂಗಕ್ಕೆ ಮಾದರಿಯಾಗಿದೆ. ಕರೊನಾ ವೈರಸ್ ಇರುವ ಕಾರಣ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದರು.
ಮುಖಂಡ ಬಿ.ಕೆ. ಬಿರಾದಾರ, ಬಿ.ಎಸ್. ಹೊಸೂರ, ವೈ.ಕೆ. ಹಳೇಮನಿ, ಮುಪ್ಪಯ್ಯ ಮುಪ್ಪಯ್ಯನಮಠ, ಹಣಮಂತ ಕುರಿ, ನ್ಯಾಯವಾದಿ ಎಂ.ಎಚ್. ಹಾಲಣ್ಣವರ, ರಾಮಣ್ಣ ವಾಲೀಕಾರ, ರವಿ ಜಗಲಿ, ಕಿರಣ ಮದರಿ, ಮಹಾಂತೇಶ ಮದರಿ, ಚಂದ್ರು ಜೋಗಿ, ಬಸವರಾಜ ಗೂಡಲಮನಿ ಮತ್ತಿತರರಿದ್ದರು. ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಪತ್ತಿನ ಸಹಕಾರಿ ಸಂಘದಲ್ಲೂ ಹೋಳ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net