ಕ್ವಾರಂಟೈನ್‌ನಲ್ಲಿದ್ದವರು ಹೋಂ ಕ್ವಾರಂಟೈನ್‌ಗೆ ಶಿಫ್ಟ್

MBL 28-3
Published on

ಮುದ್ದೇಬಿಹಾಳ: ತಾಲೂಕಿನ ರೂಢಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ವಲಸೆ ಕಾರ್ಮಿಕರನ್ನು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 14 ದಿನ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಗುರುವಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಮರಳಿ ಹೋಂ ಕ್ವಾರಂಟೈನ್‌ಗೆ ಶ್‌ಟಿ ಮಾಡಲಾಯಿತು.
ಸೇವಾ ಸದನ ಸಮಾಜಾಭಿವೃದ್ಧಿ ಸಂಸ್ಥೆ ಪರವಾಗಿ ಎಲ್ಲಾ ಕಾರ್ಮಿಕರಿಗೂ ದಿನಸಿ ಕಿಟ್ ವಿತರಿಸಿದರು. ರೂಢಗಿ ಗ್ರಾ.ಪಂ. ಪಿಡಿಒ ಎನ್.ಎಂ. ಬಿಸ್ಟಗೊಂಡ, ಸೇವಾ ಸದನ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಬೀನಾ, ಗ್ರಾ.ಪಂ. ಕಾರ್ಯದರ್ಶಿ ಸಿದ್ದು ದ್ಯಾಮಗೊಂಡ ಇದ್ದರು.
ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ ವಲಸಿಗರಿಗೆ 14 ದಿನ ಮತ್ತೆ ಹೋಂ ಕ್ವಾರಂಟೇನ್‌ನಲ್ಲಿರಲು ತಿಳಿಸಲಾಯಿತು.
ಎಸ್.ಎಸ್. ಶಿವಾಚಾರ್ಯ ಪಪೂ ಕಾಲೇಜ್‌ನಲ್ಲಿದ್ದ ಮಹಾರಾಷ್ಟ್ರದಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ಲ್ಲಿದ್ದ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಗೆ ಶ್‌ಟಿ ಮಾಡಲಾಯಿತು. ಕೋವಿಡ್-19 ತಂಡದ ಮೇಲ್ವಿಚಾರಕ ಎಂ.ಎಸ್. ಗೌಡರ ಸೇರಿದಂತೆ ಕಂದಾಯ, ಪುರಸಭೆ, ಸಾರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net