ಹದಗೆಟ್ಟ ರಸ್ತೆ ದುಸ್ಥಿತಿಗೆ ಮಹಿಳೆಯರ ಆಕ್ರೋಶ

MBL 17-1
Published on

ಮುದ್ದೇಬಿಹಾಳ: ಸುರಿಯುವ ಮಳೆಯಲ್ಲಿಯೇ ತಮ್ಮ ವಾರ್ಡ್ ರಸ್ತೆ ಹದಗೆಟ್ಟಿರುವ ಕುರಿತು ಅದರ ದುಸ್ಥಿತಿಯ ಬಗ್ಗೆ ಮಹಿಳೆಯರು ಪಟ್ಟಣದ ಮಾರುತಿ ನಗರದ ಎರಡನೇ ವಾರ್ಡ್‌ನಲ್ಲಿ ಮಂಗಳವಾರ ಸಂಜೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿ ಮಾರುತಿ ನಗರ ಪ್ರದೇಶ ಒಳಗೊಳ್ಳುತ್ತಿದ್ದು, ಶಾಸಕರ ಮನೆಯಿಂದ ಅನತಿ ದೂರದಲ್ಲಿದೆ. ಮಳೆ ಬಂದರೆ ಇಲ್ಲಿಯ ನಿವಾಸಿಗಳು ಸಂಚರಿಸುವುದೇ ದುಸ್ತರವಾಗಿದೆ. ಕಳೆದ ಒಂದು ವರ್ಷದಿಂದ ಮಣ್ಣಿನ ರಸ್ತೆಯಲ್ಲೇ ಓಡಾಡುವಂತಾಗಿದ್ದರೂ ಪುರಸಭೆ ಅಧಿಕಾರಿಗಳು ಇಲ್ಲಿ ರಸ್ತೆ ದುರಸ್ತಿ ಮಾಡಲು ಮುಂದಾಗಿಲ್ಲ ಎಂದರು ನಿವಾಸಿಗಳು ದೂರಿದ್ದಾರೆ.
ಮಾರುತಿ ನಗರದಲ್ಲಿರುವ ಮನೆಗಳ ಸುತ್ತಮುತ್ತಲೂ ಸರಿಯಾದ ರಸ್ತೆ ಇಲ್ಲ. ಗಾರ್ಡನ್ ಜಾಗೆಯಿಂದ ಒಳ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ಯುಜಿಡಿ ಕಾಮಗಾರಿ ಮಾಡಿದ ಬಳಿಕ ರಸ್ತೆ ಮಾಡದೇ ಹಾಗೆ ಬಿಟ್ಟಿದ್ದಾರೆ ಎಂದು ನಿವಾಸಿಗಳಾದ ಶಾಂತಾ ಹಾವರಗಿ, ರತ್ನಾ ಬಿದರಕುಂದಿ, ನೀಲಮ್ಮ ಬಾದವಾಡಗಿ, ರತ್ನಮ್ಮ ಹತ್ತಿ, ನೀಲಮ್ಮ ಬಲದಿನ್ನಿ, ಪೂಜಾ, ಸುಮಾ, ದೀಪಾ, ರುದ್ರೇಶ, ರೇವಣಸಿದ್ದಪ್ಪ ಒತ್ತಾಯಿಸಿದ್ದಾರೆ.

ಎರಡ್ಮೂರು ಬಾರಿ ನಾನು ಬೈಕ್ ಹಾಕಿಕೊಂಡು ಬಿದ್ದಿದ್ದೇನೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ವಾರ್ಡ್‌ನಲ್ಲಿ ರಸ್ತೆ ದುರಸ್ತಿಗೆ ಮುಂದಾಗದಿದ್ದರೆ ಪುರಸಭೆ ಎದುರಿಗೆ ವಾರ್ಡ್‌ನ ನಿವಾಸಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ.
ರುದ್ರಪ್ಪ ಬಿದರಕುಂದಿ, ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net