ಜಗಳ ಹಚ್ಚುವುದು ರಾಜಕಾರಣವಲ್ಲ

MBL 3-1
Published on

ಮುದ್ದೇಬಿಹಾಳ: ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಐದು ಲಕ್ಷ ರೂ. ವೆಚ್ಚದ ಮರಗಮ್ಮದೇವಿ ದೇವಸ್ಥಾನ ಸಭಾಭವನ ನಿರ್ಮಾಣ, 15 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆಯಡಿ 70 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚಾಲನೆ ನೀಡಿದರು.

ಜಗಳ ಹಚ್ಚುವುದು ರಾಜಕಾರಣವಲ್ಲ. ಜನರ ಅಭಿವೃದ್ಧಿಗೆ ಸರ್ಕಾರದೊಂದಿಗೆ ಜಗಳವಾಡಿ ಅನುದಾನ ತಂದು ಅಭಿವೃದ್ಧಿ ಮಾಡುವುದು ರಾಜಕಾರಣಿಯಾದವರ ಗುರಿಯಾಗಿರಬೇಕು. ಆ ದೆಸೆಯಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಿಕೊಂಡು ಬರುತ್ತಿದ್ದೇನೆ ಎಂದು ಶಾಸಕ ನಡಹಳ್ಳಿ ಹೇಳಿದರು.

ಶಾಸಕರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿದರು. ಮುದ್ದೇಬಿಹಾಳ ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ, ನಿಂಗನಗೌಡ ಮುದ್ನೂರ, ಯಲಗೂರದಪ್ಪಗೌಡ ಬಿರಾದಾರ, ಕಾಶಿರಾಯಗೌಡ ಬಿರಾದಾರ, ಬಾಬು ಗುಡಿಮನಿ, ಕಾಶಿಂಸಾಬ ವಾಲಿಕಾರ, ಇಮಾಮಸಾಬ ವಾಲಿಕಾರ್, ಬಾಬುಗೌಡ ಪಾಟೀಲ, ಮಲ್ಲಪ್ಪ ಸಜ್ಜನ, ಮಂಜುಳಾ ಮೇಟಿ , ಹಣಮಂತ್ರಾಯ ದೇವರಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net