ಪ್ರಶಸ್ತಿ, ಸನ್ಮಾನಗಳಿಂದ ಜವಾಬ್ದಾರಿ ಹೆಚ್ಚಳ

MBL 3-4
Published on

ಮುದ್ದೇಬಿಹಾಳ: ಪ್ರಶಸ್ತಿ, ಸನ್ಮಾನಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಪ್ರಶಸ್ತಿ ಪುರಸ್ಕೃತರು ತಮ್ಮಂತೆಯೇ ಇತರರನ್ನೂ ಸಾಧನೆಗೆ ಪ್ರೇರೇಪಿಸಲು ಮುಂದಾಗಬೇಕೆಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಹೇಳಿದರು. ಪಟ್ಟಣದ ವಿದ್ಯಾನಗರದಲ್ಲಿರುವ ಮಾರುತೇಶ್ವರ ದೇವಸ್ಥಾನದಲ್ಲಿ ಮಠಾಧೀಶರು, ಊರಿನ ಗಣ್ಯರು ಏರ್ಪಡಿಸಿದ್ದ ವಿಜಯಪುರ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಟಗಿ ಮೇಲಗದ್ದುಗೆ ಭೂಕೈಲಾಸಮಠದ ಗುರುಶಾಂತವೀರ ಶಿವಾಚಾರ್ಯರು, ಯಲ್ಲಾಲಿಂಗೇಶ್ವರಮಠದ ಸಿದ್ಧಲಿಂಗ ಮಹಾರಾಜರು, ಶರಣ ಸೋಮನಾಳದ ಮಹದೇವಯ್ಯ ಶಾಸಿಗಳು, ಕೆಯುಸಿ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಪುರಸಭೆ ಸದಸ್ಯೆ ಸಂಗೀತಾ ದೇವರಳ್ಳಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಡಿ.ಬಿ. ವಡವಡಗಿ, ಶ್ರೀದೇವಿ ರೂಢಗಿ ತಮಗೆ ಸಂದ ಗೌರವ ಸಮಾಜಕ್ಕೆ ಸಲ್ಲಬೇಕು ಎಂದರು. ತಹಸೀಲ್ದಾರ್ ಜಿ.ಎಸ್. ಮಳಗಿ, ಪ್ರಮುಖರಾದ ಅಶೋಕ ನಾಡಗೌಡ, ಪ್ರಭುರಾಜ ಕಲಬುರ್ಗಿ, ಮಹಾಂತೇಶ ಬೂದಿಹಾಳಮಠ, ಐ.ಬಿ. ಹಿರೇಮಠ, ಬಸಯ್ಯ ನಂದಿಕೇಶ್ವರಮಠ, ಶ್ರೀಶೈಲ ದೊಡಮನಿ ರೂಢಗಿ, ಎಸ್.ಪಿ. ಬಾದರಬಂಡಿ, ರವೀಂದ್ರ ಬಿರಾದಾರ, ಶಿವಪುತ್ರ ಅಜಮನಿ, ವಿಜಯಮಹಾಂತೇಶ ಬಂಗಾರಗುಂಡ, ಕಿರಣಗೌಡ ಪಾಟೀಲ, ಸಂಗಮೇಶ ನಂದಿಕೇಶ್ವರಮಠ, ಕಲಾವಿದ ಮುನೀರ್ ಅವಟಿಗೇರ ಮತ್ತಿತರರಿದ್ದರು. ಶ್ರೀಶೈಲ ಹೂಗಾರ ಸ್ವಾಗತಿಸಿ, ನಿರೂಪಿಸಿದರು.

ವಿವಿ ಸಂಘದಿಂದ ಸನ್ಮಾನ

ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ ಪುರಸಭೆಯ ನೂತನ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ, ವಿಜಯಪುರ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಡಿ.ಬಿ. ವಡವಡಗಿ, ಸಂಗೀತ ಶಿಕ್ಷಕ ಸಂಗಮೇಶ ಶಿವಣಗಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಚಂದ್ರ ವಿ.ಜಿ. ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ, ಎಂ.ಬಿ. ನಾವದಗಿ, ಸಿದ್ದರಾಜ ಹೊಳಿ, ಹಸಿರು ತೋರಣ ಬಳಗದ ನಿಕಟಪೂರ್ವ ಅಧ್ಯಕ್ಷ ನಾಗಭೂಷಣ ನಾವದಗಿ, ಬಿ.ಸಿ. ಮೋಟಗಿ, ಎಸ್.ಸಿ. ಹುನಗುಂದ(ಅಪ್ಪಣ್ಣ), ಸಹ ಕಾರ್ಯದರ್ಶಿ ದಾನಪ್ಪ ನಾಗಠಾಣ, ನಿರ್ದೇಶಕಿ ಗಂಗಾಂಬಿಕಾ ತಡಸದ, ಸಮಾಜಸೇವಕ ಅಶೋಕ ನಾಡಗೌಡ, ವೀರಶೈವ ಬ್ಯಾಂಕ್‌ನ ಅಧ್ಯಕ್ಷ ಈರಣ್ಣ ತಡಸದ, ರುದ್ರಗೌಡ ಪಾಟೀಲ, ರುದ್ರಗೌಡ ಅಂಗಡಗೇರಿ, ಮುಖ್ಯಗುರು ವಿ.ಐ. ಗೂಳಿ, ಎ.ಎ. ಬಾಗವಾನ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಜಿ. ಹೊಕ್ರಾಣಿ, ವಿವಿವ ಸಂಸ್ಥೆಯ ಬಾಲಕಿಯರ ಪ್ರೌಢಶಾಲೆ, ವಿಬಿಸಿ ಪ್ರೌಢಶಾಲೆ ಮತ್ತು ಜಂಗಮುರಾಳದ ವೀವಿವ ಪ್ರೌಢಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಜಹಾಂಗೀರ ಮುಲ್ಲಾ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ಮೇಟಿ ನಿರೂಪಿಸಿದರು. ಎಸ್.ಆರ್. ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net