ಅಧಿಕಾರಿಗಳ ವಿರುದ್ಧದ ಹೋರಾಟ ಅಧಿವೇಶನದಲ್ಲಿ ಪ್ರಸ್ತಾವ

MBL-24-3 (1)
ಮುದ್ದೇಬಿಹಾಳ ಪಟ್ಟಣದ ಪುರಸಭೆ ಮಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸದಸ್ಯ ಮಹೆಬೂಬ ಗೊಳಸಂಗಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಅವರ ಹೋರಾಟಕ್ಕೆ ವಿಪ ಸದಸ್ಯ ಸುನೀಲಗೌಡ ಪಾಟೀಲ ಬೆಂಬಲ ಸೂಚಿಸಿದರು. ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಇತರರಿದ್ದರು.
Published on

ಮುದ್ದೇಬಿಹಾಳ: ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಪ್ರತಿಯೊಂದರಲ್ಲೂ ಹಣ ಹೊಡೆಯುತ್ತಿದ್ದಾರೆ. ಜನರು ಸುಮ್ಮನೆ ಕೂತಿಲ್ಲ, ನಿರ್ಧಾರ ಕೈಗೊಂಡು ಉತ್ತರ ಕೊಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಎದುರಿಗೆ 37 ದಿನಗಳಿಂದ ನಡೆದಿರುವ ಪುರಸಭೆ ಸದಸ್ಯರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.

ನೀವು ಎಷ್ಟು ದಿನ ಕೂತರೂ ನಿಮಗೆ ಈ ಸರ್ಕಾರದಿಂದ ಸ್ಪಂದನೆ ಸಿಗುವುದಿಲ್ಲ. ಹಾಗಾಗಿ ವಿಧಾನಸಭೆಯಲ್ಲಿ ನಮ್ಮ ಸಹೋದರ ಎಂ.ಬಿ. ಪಾಟೀಲರು, ವಿಧಾನಪರಿಷತ್‌ನಲ್ಲಿ ನಾನು ಹಾಗೂ ಪ್ರಕಾಶ ರಾಠೋಡ ಅವರು ಧ್ವನಿ ಎತ್ತುತ್ತೇವೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಹೋರಾಟಗಾರರಿಗೆ ತಿಳಿಸಿದರು.

ಸರ್ಕಾರದ ಪ್ರಮುಖ ಖಾತೆಯಲ್ಲಿರುವ ಪ್ರಮುಖ ಖಾತೆಯಲ್ಲಿರುವ ಮಂತ್ರಿಯೇ ಸರ್ಕಾರ ನಡೆಯುತ್ತಿಲ್ಲ ನಾವಿದನ್ನು ತಳ್ಳುತ್ತಿದ್ದೇವೆ ಎಂದು ಯಾವ ಮಟ್ಟದಲ್ಲಿ ಆಡಳಿತ ನಡೆದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮತಕ್ಷೇತ್ರದಲ್ಲೂ ಹೇಗೆ ಕೆಲಸಗಳು ನಡೆದಿವೆ ಎಂಬುದನ್ನು ಸ್ವತಃ ಅವರ ಸಹೋದರರೇ ಬಿಡಿಸಿ ಹೇಳಿದ್ದಾರೆ. ಎಲ್ಲದರಲ್ಲೂ ಭ್ರಷ್ಟಾಚಾರ ಮನೆ ಮಾಡಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ಇಷ್ಟೊಂದು ಅಕ್ರಮ ಕ್ಷೇತ್ರದಲ್ಲಿ ನಡೆದಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಅನ್ಯಾಯವಾದವರು ನಾಲ್ಕು ಸಾವಿರ ಜನ ಹೋರಾಟದಲ್ಲಿ ಬಂದು ಕೂಡಲಿ ಸರ್ಕಾರ ಏಕೆ ಕಣ್ಣು ತೆರೆಯುವುದಿಲ್ಲ ಎಂದು ನೋಡೋಣ ಎಂದರು.

ಸದಸ್ಯ ಮಹೆಬೂಬ ಗೊಳಸಂಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ, ಹೋರಾಟಗಾರ ಸಿದ್ಧಣ್ಣ ಮೇಟಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಸಂಘ-ಸಂಸ್ಥೆಗಳ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net