ಗ್ರಾಮಸ್ಥರಿಂದ ಶಿಕ್ಷಕಿ ವಿಜಾಪುರಗೆ ಬಿಳ್ಕೊಡುಗೆ

MBL 2-1
Published on

ಮುದ್ದೇಬಿಹಾಳ: ಶಿಕ್ಷಕರಾಗಿ 36 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ತಾಲೂಕಿನ ಕಂದಗನೂರ ಎಚ್‌ಪಿಎಸ್ ಶಾಲೆ ಹಿರಿಯ ಶಿಕ್ಷಕಿ ಎಸ್.ಪಿ. ವಿಜಾಪೂರ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು. ಗ್ರಾಮದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಜತೆಗೆ ಅವರ ಪತಿ ನಿವೃತ್ತ ಪಿಎಸ್‌ಐ ಸಿ.ಬಿ. ಕಬಾಡೆ ಅವರನ್ನು ಸನ್ಮಾನಿಸಲಾಯಿತು. ಊರಿನ ಪ್ರಮುಖ ಶಿವನಗೌಡ ಬಿರಾದಾರ ಮಾತಾಡಿದರು. ಪ್ರೌಢಶಾಲೆಯ ಮುಖ್ಯಗುರು ಸಿ.ಎಂ. ಬೆನ್ನೂರ, ಮುಖ್ಯಗುರು ಎ.ಆರ್. ಮುಲ್ಲಾ, ಪಿಕೆಪಿಎಸ್ ಸಿಇಓ ಎಸ್.ಬಿ. ಕಣಕಾಲ ಇದ್ದರು.ಎಂ.ಎ. ಪಾಟೀಲ ನಿರೂಪಿಸಿದರು. ಶಿಕ್ಷಕ ತಳವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net