ಸ್ಕೌಟ್ಸ, ಗೈಡ್ಸ ಅಧ್ಯಕ್ಷರಾಗಿ ಸೋಮನಗೌಡ ಆಯ್ಕೆ

Scouts
Published on

ಮುದ್ದೇಬಿಹಾಳ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಪುನಾರಚನೆಗೊಂಡಿದ್ದು, ಗೌರವಾಧ್ಯಕ್ಷರಾಗಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
ಹಿರಿಯ ಉಪಾಧ್ಯಕ್ಷರಾಗಿ ಡಿ.ಬಿ. ವಡವಡಗಿ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಪುನರಾಯ್ಕೆಗೊಂಡಿದ್ದು, ಅಭ್ಯುದಯ ಪಿಯು ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಎಸ್‌ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ನಾಯಕ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯೆ ಸಹನಾ ಬಡಿಗೇರ ಇತರೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸ್ಕೌಟ್ಸ್ ಕಮೀಷನರ್ ಆಗಿ ಡಿಡಿಪಿಐ ಪ್ರಸನ್ನಕುಮಾರ, ಜಿಲ್ಲಾ ಗೈಡ್ಸ್ ಕಮೀಷನರ್ ಆಗಿ ಮುಖ್ಯಾಧ್ಯಾಪಕಿ ಅರುಂಧತಿ ಡಿ, ಸ್ಕೌಟ್ಸ್ ಅಸಿಸ್ಟೆಂಟ್ ಕಮೀಷನರ್ ಆಗಿ ಬಿಇಓ ವೀರೇಶ ಜೇವರಗಿ, ಗೈಡ್ಸ್ ಅಸಿಸ್ಟಂಟ್ ಕಮೀಷನರ್ ಆಗಿ ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದ ಮುಖ್ಯಾಧ್ಯಾಪಕಿ ನೀಲಮ್ಮ ತೆಗ್ಗಿನಮಠ, ಖಜಾಂಚಿಯಾಗಿ ಜಿ.ಎನ್. ಹೂಗಾರ, ಕಾರ್ಯ್ದದರ್ಶಿಯಾಗಿ ಜಿ.ಎಚ್. ಚವಾಣ್, ಸಹಕಾರ್ಯದರ್ಶಿಯಾಗಿ ಎಂ.ಎಸ್.ಪಾಟೀಲ, ಜಂಟಿಕಾರ್ಯದರ್ಶಿಯಾಗಿ ವಿದ್ಯಾವತಿ ಬದಿ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net